ನನ್ನ ಸ್ಟ್ರಗಲ್‌ ಇನ್ನೂ ಮುಂದುವರಿದಿದೆ: ದೀಕ್ಷಿತ್‌ ಶೆಟ್ಟಿ

| Published : Feb 15 2024, 01:15 AM IST

ಸಾರಾಂಶ

ದೀಕ್ಷಿತ್ ಶೆಟ್ಟಿ ನಟನೆಯ ಕೆಟಿಎಂ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಟ ತನ್ನ ಕಷ್ಟ ಸುಖ ಹಂಚಿಕೊಂಡಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

‘ದಿಯಾದಿಂದ ಇಲ್ಲಿಯವರೆಗೆ ನಾಲ್ಕು ವರ್ಷಗಳ ಸಿನಿಮಾ ಪ್ರಯಾಣ. ಅಭಿನಯದ ಬಗ್ಗೆ ಮೆಚ್ಚುಗೆ ಸಿಕ್ಕಿದರೂ ಇಂದಿಗೂ ನನ್ನ ಸ್ಟ್ರಗಲ್‌ ಮುಂದುವರಿದಿದೆ’ ಎಂದು ದೀಕ್ಷಿತ್‌ ಶೆಟ್ಟಿ ಹೇಳಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಕೆಟಿಎಂ’ ಚಿತ್ರ ನಾಳೆ ತೆರೆಗೆ ಬರಲಿದೆ. ಇತ್ತೀಚಿಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು. ಈ ವೇಳೆ ದೀಕ್ಷಿತ್‌, ‘ಕೆಟಿಎಂ ಸಿನಿಮಾದಲ್ಲಿ ಮೂರು ಶೇಡ್‌ನಲ್ಲಿ ನಟಿಸಿದ್ದೇನೆ. ಇದಕ್ಕಾಗಿ 8 ಕೆಜಿ ತೂಕ ಇಳಿಸಿದ್ದೆ. 10 ಕೆಜಿ ತೂಕ ಹೆಚ್ಚಿಸಿದ್ದೆ. 10 ತಿಂಗಳ ಕಾಲ ನೋ ಶೇವ್‌, ನೋ ಹೇರ್‌ಕಟ್‌. ಕೋವಿಡ್‌ ವೇಳೆ ಸಾರ್ವಜನಿಕ ಶೌಚಾಲಯದಲ್ಲಿ ಮಲಗಿ ಶೂಟಿಂಗ್‌ ಮಾಡಿದ್ದೆ. ಈ ಸಿನಿಮಾಕ್ಕೆ ನನ್ನೆಲ್ಲ ಶ್ರಮ ಧಾರೆ ಎರೆದಿದ್ದೇನೆ. ಈ ಚಿತ್ರ ನಮ್ಮೆಲ್ಲರಿಗೂ ಒಂದೊಳ್ಳೆ ಬ್ರೇಕ್‌ ಕೊಡಬೇಕಿದೆ’ ಎಂದರು. ನಿರ್ದೇಶಕ ಅರುಣ್‌, ‘ನಮ್ಮ ನಡುವೆ ನಡೆಯುವ ಕಥೆ. ಒಬ್ಬ ಮುಗ್ಧ ಹುಡುಗನ ಬದುಕಿನ ಪಯಣವನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ’ ಎಂದರು.ಕಾಜಲ್‌ ಕುಂದರ್‌ ಹಾಗೂ ಸಂಜನಾ ದಾಸ್‌ ನಾಯಕಿಯರು. ಕಿರುತೆರೆ ನಟರಾದ ಅಭಿಷೇಕ್‌, ದೇವ್‌ ದೇವಯ್ಯ ನಟಿಸಿದ್ದಾರೆ. ವಿನಯ್‌ ಕುಮಾರ್‌ ನಿರ್ಮಾಪಕರು. ಹಾಸ್ಯನಟ ತುಕಾಲಿ ಸಂತೋಷ್‌, ಸಹ ನಿರ್ಮಾಪಕ ರಕ್ಷತ್‌ ಸುದ್ದಿಗೋಷ್ಠಿಯಲ್ಲಿದ್ದರು.