ಬಹು ಬೇಡಿಕೆಯ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಅಮಿತಾಬ್‌ ಬಚ್ಚನ್ ನಟನೆಯ ‘ದಿ ಇಂಟರ್ನ್‌’ ಸಿನಿಮಾದಿಂದ ಹೊರಬಂದಿದ್ದಾರೆ.

ಸಿನಿವಾರ್ತೆ

ಬಹು ಬೇಡಿಕೆಯ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಅಮಿತಾಬ್‌ ಬಚ್ಚನ್ ನಟನೆಯ ‘ದಿ ಇಂಟರ್ನ್‌’ ಸಿನಿಮಾದಿಂದ ಹೊರಬಂದಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ನಟಿಸುವುದರ ಬದಲು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

2021ರಲ್ಲೇ ಹಾಲಿವುಡ್‌ನ ಸೂಪರ್‌ ಹಿಟ್‌ ಸಿನಿಮಾ ‘ದಿ ಇಂಟರ್ನ್‌’ ನ ಹಿಂದಿ ರಿಮೇಕ್ ಘೋಷಣೆಯಾಗಿತ್ತು. ಅದರೆ ಅನೇಕ ಕಾರಣಗಳಿಗೆ ಈ ಪ್ರಾಜೆಕ್ಟ್ ಮುಂದಕ್ಕೆ ಹೋಗಿರಲಿಲ್ಲ. ಇದೀಗ ನಿರ್ಮಾಣದ ಹೊಣೆಗಾರಿಕೆಯನ್ನು ದೀಪಿಕಾ ಹೆಗಲಿಗೇರಿಸಿಕೊಂಡಿದ್ದು, ಹೊಸ ನಾಯಕಿಯ ಶೋಧದಲ್ಲಿ ಚಿತ್ರತಂಡವಿದೆ.