ದೈಜಿಯಲ್ಲಿ ರಮೇಶ್‌ ಅರವಿಂದ್‌ ತಮ್ಮನಾಗಿ ದಿಗಂತ್

| Published : May 07 2025, 12:50 AM IST

ಸಾರಾಂಶ

ನಟ ದಿಗಂತ್ ಅವರು ದೈಜಿ ಚಿತ್ರದಲ್ಲಿ ರಮೇಶ್ ಅರವಿಂದ್ ಅವರಿಗೆ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ರಮೇಶ್‌ ಅರವಿಂದ್‌ ನಾಯಕನಾಗಿ ನಟಿಸುತ್ತಿರುವ ‘ದೈಜಿ’ ಚಿತ್ರಕ್ಕೆ ನಟ ದಿಗಂತ್‌ ಸೇರ್ಪಡೆ ಆಗಿದ್ದಾರೆ. ಆಕಾಶ್‌ ಶ್ರೀವತ್ಸ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ದಿಗಂತ್‌ ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರ ತಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ. ಪಾತ್ರದ ಹೆಸರು ಗಗನ್‌ ಎಂಬುದು. ಈಗ ಚಿತ್ರಕ್ಕೆ ಶೇ.50ರಷ್ಟು ಚಿತ್ರೀಕರಣ ಆಗಿದೆ. ರವಿ ಕಶ್ಯಪ್‌ ಚಿತ್ರದ ನಿರ್ಮಾಪಕರು. ಇದು ರಮೇಶ್‌ ಅರವಿಂದ್‌ ಅವರ 106ನೇ ಚಿತ್ರವಾಗಿದೆ.