ದಿಗಂತ್‌, ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್ ಇಂದು ರಿಲೀಸ್

| Published : Apr 05 2024, 01:08 AM IST / Updated: Apr 05 2024, 05:59 AM IST

ದಿಗಂತ್‌, ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್ ಇಂದು ರಿಲೀಸ್
Share this Article
  • FB
  • TW
  • Linkdin
  • Email

ಸಾರಾಂಶ

ದಿಗಂತ್‌, ಸಂಗೀತಾ ಶೃಂಗೇರಿ ನಟನೆಯ ಥ್ರಿಲ್ಲರ್ ಸಿನಿಮಾ ಮಾರಿಗೋಲ್ಡ್ ಇಂದು (ಏಪ್ರಿಲ್ 5) ರಿಲೀಸ್ ಆಗುತ್ತಿದೆ.

ದಿಗಂತ್‌ ರೊಮ್ಯಾಂಟಿಕ್ ಹೀರೋ ಆಗಿಯೇ ಜನಪ್ರೀತಿ ಗಳಿಸಿದ್ದಾರೆ. ಇದೀಗ ಅವರು ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಮಾರಿಗೋಲ್ಡ್‌’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. 

ರಘುವರ್ಧನ್ ನಿರ್ಮಾಣದ ಚಿತ್ರವನ್ನು ರಾಘವೇಂದ್ರ ಎಂ. ನಾಯ್ಕ ನಿರ್ದೇಶಿಸಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ.‘ದಿಗಂತ್‌ ಒಬ್ಬ ಕ್ರೀಡಾಪಟು ಆಗಿರುವುದರಿಂದ ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಉದ್ದೇಶ ಇತ್ತು. ಈ ಸಿನಿಮಾ ತಾಜಾತನದಿಂದ ಕೂಡಿದೆ’ ಎಂದು ನಿರ್ದೇಶಕ ರಾಘವೇಂದ್ರ ನಾಯ್ಕ್‌ ಹೇಳಿಕೊಂಡಿದ್ದಾರೆ. 

ದಿಗಂತ್‌, ‘ತುಂಬಾ ಶ್ರಮದಿಂದ ಚಿತ್ರೀಕರಣ ನಡೆಸಿದ್ದೇವೆ. ಈ ಸಿನಿಮಾ ನೋಡಿದ ಮೇಲೆ ತುಂಬಾ ಚೆನ್ನಾಗಿ ನಟಿಸಿದ್ದೇನೆ’ ಅನ್ನಿಸಿತು ಎಂದು ತಿಳಿಸಿದ್ದಾರೆ.ಬಂಗಾರದ ಬಿಸ್ಕತ್ತು ಮಾರಲು ಹೊರಡುವ ಕಥೆಯನ್ನು ಹೊಂದಿರುವ ಈ ಸಿನಿಮಾ ಥ್ರಿಲ್ಲರ್‌ ಜಾನರ್‌ನಲ್ಲಿ ಮೂಡಿ ಬಂದಿದೆ. ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.