ನಿರ್ದೇಶಕರು ತಮ್ಮೂರಿನ ಕತೆ ಹೇಳಿದ್ದಾರೆ : ಮಾರ್ನಮಿ ಚಿತ್ರದ ಬಗ್ಗೆ ಕಿಚ್ಚ ಸುದೀಪ್‌

| N/A | Published : Nov 15 2025, 01:13 PM IST

Kichcha Sudeep
ನಿರ್ದೇಶಕರು ತಮ್ಮೂರಿನ ಕತೆ ಹೇಳಿದ್ದಾರೆ : ಮಾರ್ನಮಿ ಚಿತ್ರದ ಬಗ್ಗೆ ಕಿಚ್ಚ ಸುದೀಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಚೈತ್ರಾ ಆಚಾರ್‌ ಹಾಗೂ ರಿತ್ವಿಕ್‌ ಮಠದ್‌ ನಟನೆಯ ‘ಮಾರ್ನಮಿ’ ಚಿತ್ರ ನ.28ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ತಮ್ಮದೇ ಊರಿನ ಕತೆಯನ್ನು ನಿರ್ದೇಶ ರಿಶಿತ್‌ ಶೆಟ್ಟಿ ತೆರೆ ಮೇಲೆ ತಂದಿದ್ದಾರೆ. ಚರಣ್‌ ರಾಜ್‌ ಸಂಗೀತ ಗಮನ ಸೆಳೆಯುತ್ತಿದೆ’ ಎಂದರು.

 ಸಿನಿವಾರ್ತೆ :  ಚೈತ್ರಾ ಆಚಾರ್‌ ಹಾಗೂ ರಿತ್ವಿಕ್‌ ಮಠದ್‌ ನಟನೆಯ ‘ಮಾರ್ನಮಿ’ ಚಿತ್ರ ನ.28ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.

 ಟ್ರೇಲರ್‌ ಚೆನ್ನಾಗಿದೆ

ಈ ಸಂದರ್ಭದಲ್ಲಿ ಸುದೀಪ್‌, ‘ಟ್ರೇಲರ್‌ ಚೆನ್ನಾಗಿದೆ. ಹಾರ್ಡ್‌ ವರ್ಕ್‌ ಹಾಗೂ ಭಾವನಾತ್ಮಕ ನಂಟು ಇಲ್ಲದೆ ಹೋದರೆ ಇಂಥ ಕತೆಗಳನ್ನು ತೆರೆ ಮೇಲೆ ತರುವುದು ದೊಡ್ಡ ಸವಾಲಿನ ಕೆಲಸ. ಇದರಲ್ಲಿ ಚಿತ್ರತಂಡ ಗೆದ್ದಿದೆ. ತಮ್ಮದೇ ಊರಿನ ಕತೆಯನ್ನು ನಿರ್ದೇಶ ರಿಶಿತ್‌ ಶೆಟ್ಟಿ ತೆರೆ ಮೇಲೆ ತಂದಿದ್ದಾರೆ. ಚರಣ್‌ ರಾಜ್‌ ಸಂಗೀತ ಗಮನ ಸೆಳೆಯುತ್ತಿದೆ’ ಎಂದರು.

ನಾನು ಕಿಚ್ಚ ಅಭಿಮಾನಿ

ನಿರ್ದೇಶಕ ರಿಶಿತ್‌ ಶೆಟ್ಟಿ, ‘ನಾನು ಕಿಚ್ಚ ಅಭಿಮಾನಿ. ಅವರ ಸಿನಿಮಾ ಹಾಡುಗಳಿಗೆ ನಾನು ಗಣೇಶೋತ್ಸವದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದೆ. ಈಗ ಅದೇ ಕಿಚ್ಚಿನ ಪಕ್ಕ ನಿಲ್ಲೋ ಅವಕಾಶ ಸಿಕ್ಕಿದೆ’ ಎಂದರು. ರಿತ್ವಿಕ್‌ ಮಠದ್‌, ‘ಕರಾವಳಿ ಭಾಗದಲ್ಲಿ ನಡೆದ ಕಥೆಯನ್ನು ಹೇಳಲು ಹೊರಟಿದ್ದೇವೆ’ ಎಂದರು. ಸುಮನ್‌ ತಲ್ವಾರ್‌, ಪ್ರಕಾಶ್‌ ತುಮಿನಾಡು, ಸೋನು ಗೌಡ , ಸ್ವರಾಜ್‌ ಶೆಟ್ಟಿ, ಮೈಮ್‌ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ನಟಿಸಿದ್ದಾರೆ.

Read more Articles on