ಸಾರಾಂಶ
ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಮೊದಲ ಹಾಡು ಸರೆಗಮಪ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ. ‘ಸೈಕ್ ಸೈತಾನ್’ ಹೆಸರಿನ ಈ ಮಾಸ್ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್, ಅನಿರುದ್ಧ ಶಾಸ್ತ್ರಿ ಹಾಡಿದ್ದಾರೆ.
ಸಿನಿವಾರ್ತೆ
ಸುದೀಪ್ ನಟನೆಯ ಬಹುಭಾಷೆಯಲ್ಲಿ ಮೂಡಿ ಬರುತ್ತಿರುವ ‘ಮಾರ್ಕ್’ ಚಿತ್ರದ ಮೊದಲ ಹಾಡು ಸರೆಗಮಪ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ. ‘ಸೈಕ್ ಸೈತಾನ್’ ಹೆಸರಿನ ಈ ಮಾಸ್ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್, ಅನಿರುದ್ಧ ಶಾಸ್ತ್ರಿ ಹಾಡಿದ್ದಾರೆ.
ಹಾಡಿನ ಸಾಹಿತ್ಯ ಹಾಗೂ ಅಜನೀಶ್ ಲೋಕನಾಥ್ ಅವರ ಸಂಗೀತ ಇಲ್ಲಿನ ಹೈಲೈಟ್ ಆಗಿದ್ದು, ಹಾಡಿನಲ್ಲಿ ಸುದೀಪ್ ಅವರ ಮ್ಯಾನರಿಸಂ ಅನ್ನು ಕಟ್ಟಿಕೊಡಲಾಗಿದೆ. ಹೀಗಾಗಿ ಕಿಚ್ಚನ ಅಭಿಮಾನಿಗಳಿಗೆ ಇದು ಉತ್ಸಾಹದ ಕಿಕ್ ಕೊಡುವ ಹಾಡಾಗಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹಾಡಿನ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಹುಕ್ ಸ್ಟೆಪ್ ಹಾಕುವ ಸವಾಲು ಕೊಟ್ಟಿದೆ.
ಹಾಡಿನಲ್ಲಿ ಸುದೀಪ್ ಅವರು ಹಾಕಿರುವ ಯಾವುದಾದರೂ ಒಂದು ಸ್ಟೆಪ್ ಆಯ್ಕೆ ಮಾಡಿಕೊಂಡು, ಹಾಡನ್ನು ಪ್ಲೇ ಮಾಡಿಕೊಂಡು ಡ್ಯಾನ್ಸ್ ಮಾಡಬೇಕು. ಈ ಡ್ಯಾನ್ಸ್ ವಿಡಿಯೋ ನಿಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ markthefilm ಹೆಸರಿನ ಇನ್‌ಸ್ಟಾ ಅಕೌಂಟ್‌ಗೆ ಟ್ಯಾಗ್ ಮಾಡುವ ಜೊತೆಗ #MARKHOOKSTEPCHALLENGE ಎಂಬ ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಬೇಕು. ‘ಅತ್ಯುತ್ತಮ ಡ್ಯಾನ್ಸ್ ರೀಲ್‌ಗೆ ಬಹುಮಾನ ಕೂಡ ಸಿಗಲಿದೆ’ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಡಿಸೆಂಬರ್ 25ಕ್ಕೆ ತೆರೆಗೆ ಬರುತ್ತಿರುವ ‘ಮಾರ್ಕ್’ ಚಿತ್ರವನ್ನು ಕಾರ್ತಿಕೇಯ ನಿರ್ದೇಶಿಸಿದ್ದಾರೆ.