ಸಾರಾಂಶ
‘ಮಾರ್ಕ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಕಿಚ್ಚ ಸುದೀಪ್ ಐಷಾರಾಮಿ ಸ್ಕೋಡಾ ಕುಶಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಮಾರ್ಕ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಈ ಉಡುಗೊರೆ ನೀಡಲಾಗಿದೆ ಎನ್ನಲಾಗಿದೆ.
‘ಮಾರ್ಕ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಕಿಚ್ಚ ಸುದೀಪ್ ಐಷಾರಾಮಿ ಸ್ಕೋಡಾ ಕುಶಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಮಾರ್ಕ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಈ ಉಡುಗೊರೆ ನೀಡಲಾಗಿದೆ ಎನ್ನಲಾಗಿದೆ.
ಹಿಂದೆ ಸುದೀಪ್ ಹಾಗೂ ವಿಜಯ ಕಾರ್ತಿಕೇಯ ಕಾಂಬಿನೇಶನ್‌ನಲ್ಲಿ ಬಂದ ‘ಮ್ಯಾಕ್ಸ್’ ಸಿನಿಮಾ ಯಶಸ್ವಿಯಾಗಿತ್ತು. ಬಳಿಕ ಮತ್ತೆ ಅದೇ ನಿರ್ದೇಶಕರೊಂದಿಗೆ ಸುದೀಪ್ ಆ್ಯಕ್ಷನ್ ಡ್ರಾಮಾ ಮಾಡುತ್ತಿದ್ದು, ಈ ವರ್ಷ ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಕೇವಲ ಏಳು ತಿಂಗಳಲ್ಲಿ ವೇಗವಾಗಿ ಈ ಸಿನಿಮಾದ ಕೆಲಸ ನಡೆದಿದ್ದು, ನಿರ್ದೇಶಕರ ಕೆಲಸಕ್ಕೆ ಮೆಚ್ಚಿ ಸುದೀಪ್ ಈ ಉಡುಗೊರೆ ನೀಡಿದ್ದಾರಂತೆ.
ಸುದೀಪ್ ಗಿಫ್ಟ್ ನೀಡಿರುವ ಸ್ಕೋಡಾ ಕೈಲಾಕ್ ‘ಕಾರ್ಬನ್ ಸ್ಟೀಲ್’ ಬಣ್ಣದ ಕಾರು ಹೈಎಂಡ್ ವರ್ಶನ್ ಎನ್ನಲಾಗಿದ್ದು, ಇದರ ಬೆಲೆ 15.80 ಲಕ್ಷ ರು.ವರೆಗೆ ಇದೆ.