ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ‘ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ಬಾಲಿವುಡ್‌ನಲ್ಲಿ ವಿವಾಹಿತ ನಟಿಯನ್ನು ಪ್ರತ್ಯೇಕಿಸಿ ನೋಡುವ ಮನೋಭಾವವಿದೆ’ ಎಂದಿದ್ದಾರೆ.

 ಸಿನಿವಾರ್ತೆ

‘ನಾನು ಸಿತಾರೆ ಜಮೀನ್‌ ಪರ್‌ ಚಿತ್ರಕ್ಕೆ ಆಯ್ಕೆಯಾದಾಗ ಬಾಲಿವುಡ್‌ನ ಅನೇಕರು ಹುಬ್ಬೇರಿಸಿದರು, ನೀವು ಲಕ್ಕಿ ಅಂದರು. ಅಮೀರ್‌ ಖಾನ್‌ರಂಥಾ ನಟನ ಜೊತೆಗೆ ನಟಿಸುವುದು ಅದೃಷ್ಟವೇ, ಆದರೆ ನಾನು ಆಡಿಷನ್‌ನಲ್ಲಿ ನನ್ನ ಯೋಗ್ಯತೆ ಸಾಬೀತು ಪಡಿಸಿಯೇ ಆ ಪಾತ್ರಕ್ಕೆ ಆಯ್ಕೆಯಾಗಿದ್ದೆ. ಆದರೆ ಇಂಡಸ್ಟ್ರಿಯವರ ವ್ಯಾಖ್ಯಾನ ಬೇರೆ ಬಗೆಯದಾಗಿತ್ತು’ ಎಂದು ನಟಿ ಜೆನಿಲಿಯಾ ಡಿಸೋಜಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ‘ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ಬಾಲಿವುಡ್‌ನಲ್ಲಿ ವಿವಾಹಿತ ನಟಿಯನ್ನು ಪ್ರತ್ಯೇಕಿಸಿ ನೋಡುವ ಮನೋಭಾವವಿದೆ’ ಎಂದಿದ್ದಾರೆ.

‘ವಿವಾಹಿತೆಯರಿಗೆ ಅವರ ವಯಸ್ಸಿಗಿಂತ ಹಿರಿಯ ಪಾತ್ರಗಳನ್ನು ನೀಡಲಾಗುತ್ತದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಮಾತ್ರ ಯಾಕೆ ವೈವಾಹಿಕ ಸ್ಟೇಟಸ್‌ ಮುಖ್ಯವಾಗುತ್ತೋ ಗೊತ್ತಿಲ್ಲ. ಸಿತಾರೆ ಜಮೀನ್‌ ಪರ್‌ ಸಿನಿಮಾದಲ್ಲಿ ನಲವತ್ತರ ಆಸುಪಾಸಿನ ಹೆಣ್ಣಿನ ಪಾತ್ರ ಮಾಡಿದ್ದೇನೆ’ ಎಂದು ಹೇಳಿದ್ದಾರೆ.