ಸಾರಾಂಶ
ಬಿಎಂಟಿಸಿ ಬಸ್‌ನಲ್ಲಿ ಬಿಗ್‌ಬಾಸ್ ಬೆಡಗಿ ದಿವ್ಯಾ ಸುರೇಶ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸಿನಿವಾರ್ತೆ
ಬಿಗ್‌ಬಾಸ್ ಸ್ಪರ್ಧಿ, ಸಿನಿಮಾ, ಕಿರುತೆರೆ ನಟಿ ದಿವ್ಯಾ ಸುರೇಶ್ ಬಿಎಂಟಿಸಿ ಬಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಸಂಪ್ರದಾಯಸ್ಥ ಹುಡುಗಿಯ ಗೆಟಪ್‌ನಲ್ಲಿ ಚೆಂದಕ್ಕೆ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಈ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ.
ದಿವ್ಯಾ ಸದ್ಯ ತೆಲುಗು ಕಿರುತೆರೆಯಲ್ಲಿ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಈ ಫೋಟೋಶೂಟ್ ನಡೆದಿರುವುದು ಕನ್ನಡ ಧಾರಾವಾಹಿಗಾ ಅಥವಾ ಸಿನಿಮಾಕ್ಕಾ ಎಂದು ಅಭಿಮಾನಿಗಳು ನಟಿಯನ್ನು ಪ್ರಶ್ನಿಸಿದ್ದಾರೆ. ಆದರೆ ದಿವ್ಯಾ ಈ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ.