ಬ್ಲಡ್‌ ಮಾಫಿಯಾ ಕತೆ ಹೇಳುವ 5ಡಿ

| Published : Feb 15 2024, 01:15 AM IST

ಸಾರಾಂಶ

ಎಸ್ ನಾರಾಯಣ್ ನಿರ್ದೇಶಿಸಿ, ಆದಿತ್ಯ ನಾಯಕನಾಗಿ ನಟಿಸಿರುವ 5ಡಿ ಸಿನಿಮಾ ಫೆ.16ಕ್ಕೆ ತೆರೆ ಮೇಲೆ ಬರುತ್ತಿದೆ. ಬ್ಲೆಡ್‌ ಮಾಫಿಯಾ ಕತೆಯನ್ನು ಹೇಳುವ ಸಿನಿಮಾ ಇದಾಗಿದೆ.

ಕನ್ನಡಪ್ರಭ ಸಿನಿವಾರ್ತೆಎಸ್‌ ನಾರಾಯಣ್‌ ನಿರ್ದೇಶನದ ‘5ಡಿ’ ಸಿನಿಮಾ ಫೆ.16ಕ್ಕೆ ತೆರೆ ಮೇಲೆ ಬರುತ್ತಿದೆ. ಆದಿತ್ಯ, ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಈ ಚಿತ್ರವನ್ನು ಕುಮಾರ್‌ ಹಾಗೂ ಸ್ವಾತಿ ಕುಮಾರ್‌ ದಂಪತಿ ನಿರ್ಮಿಸಿದ್ದಾರೆ. ಚಿತ್ರದ ಟ್ರೇಲರ್‌ ಬಿಡುಗಡೆ ಆಗಿ ಗಮನ ಸೆಳೆದಿದೆ. ‘ನನ್ನ ಕೆರಿಯರ್‌ನಲ್ಲಿ ಮಾಫಿಯಾ ನೆರಳಿನ ಸಿನಿಮಾ ಮಾಡಿರುವುದು ಮೊದಲು. ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಕತೆ ಆಗುತ್ತದೆಂಬ ನಂಬಿಕೆ ಇದೆ’ ಎನ್ನುವ ಎಸ್‌ ನಾರಾಯಣ್‌, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.