ಸಾರಾಂಶ
ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರತಂಡ 25 ದಿನಗಳ ಸಂಭ್ರಮ ಆಚರಿಸಿಕೊಂಡಿದೆ.ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದು ಸಂಭ್ರಮ ಹಂಚಿಕೊಂಡಿತು.
ಸಿನಿವಾರ್ತೆ : ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರತಂಡ 25 ದಿನಗಳ ಸಂಭ್ರಮ ಆಚರಿಸಿಕೊಂಡಿದೆ.
ಈ ಸಂದರ್ಭದಲ್ಲಿ ನಿರ್ದೇಶಕ ನವೀನ್ ದ್ವಾರಕನಾಥ್, ‘ಇದು ನನ್ನ ಮೊದಲ ಸಿನಿಮಾ. 25 ದಿನಗಳನ್ನು ಪೂರೈಸಿದ್ದು ಖುಷಿ ಕೊಟ್ಟಿದೆ. ನನ್ನ ಕನಸಿಗೆ ಜತೆಯಾದ ನಿರ್ಮಾಪಕ ನವೀನ್ ರಾವ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳು. ಜೂನ್‌ನಲ್ಲಿ ಈ ಸಿನಿಮಾ ತೆಲುಗಿಗೆ ಡಬ್ ಆಗಲಿದೆ’ ಎಂದರು.
ನಟ ಪೃಥ್ವಿ ಅಂಬಾರ್, ‘ಸಿನಿಮಾ ಗೆದ್ದಿರುವುದು ಖುಷಿ ಇದೆ. ನಿರ್ದೇಶಕರು ನಿರ್ಮಾಪಕರು ಇಬ್ಬರು ಸೇರಿ ಆಸಕ್ತಿಯಿಂದ ರೂಪಿಸಿದ್ದ ಸಿನಿಮಾ ಇದು. ಇಬ್ಬರು ಇದೇ ರೀತಿ ಮುಂದೆ ಸಾಗಲಿ’ ಎಂದು ಹಾರೈಸಿದರು.