ಗೋಲ್ಡನ್‌ಸ್ಟಾರ್‌ ಗಣೇಶ್‌ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಶ್ರೀನಿವಾಸ್‌ ರಾಜು ಹಾಗೂ ಗಣೇಶ್‌ ಕಾಂಬಿನೇಶ್‌ನಲ್ಲಿ ಸೆಟ್ಟೇರಿ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಸಿನಿಮಾ ಕನ್ನಡದ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ.

ಗೋಲ್ಡನ್‌ಸ್ಟಾರ್‌ ಗಣೇಶ್‌ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಶ್ರೀನಿವಾಸ್‌ ರಾಜು ಹಾಗೂ ಗಣೇಶ್‌ ಕಾಂಬಿನೇಶ್‌ನಲ್ಲಿ ಸೆಟ್ಟೇರಿ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಸಿನಿಮಾ ಕನ್ನಡದ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಇದೊಂದು ಯೂನಿವರ್ಸ್‌ಲ್‌ ಕತೆ

ನಿರ್ದೇಶಕ ಶ್ರೀನಿವಾಸ್‌ ರಾಜು, ‘ಇದೊಂದು ಯೂನಿವರ್ಸ್‌ಲ್‌ ಕತೆಯಾಗಿರುವುದರಿಂದ ಕನ್ನಡದ ಜೊತೆಗೆ ಹಿಂದಿಯಲ್ಲೂ ನೇರ ಬಿಡುಗಡೆ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಈಗ ಸೌತ್‌ ಚಿತ್ರಗಳನ್ನು ನಾರ್ತ್‌ ಇಂಡಿಯಾ ಪ್ರೇಕ್ಷಕರು ನೋಡುತ್ತಿದ್ದಾರೆ. ಅಲ್ಲಿನ ಪ್ರೇಕ್ಷಕರಿಗೆ ಯಾವ ಸ್ಟಾರ್‌ ಎಂಬುದು ಮುಖ್ಯವಾಗುತ್ತಿಲ್ಲ. ಕತೆಗಳನ್ನು ನೋಡುತ್ತಿದ್ದಾರೆ. ಹೀಗಾಗಿ ಗಣೇಶ್‌ ಬಾಲಿವುಡ್‌ಗೆ ಹೋಗುವುದಕ್ಕೆ ಈ ಸಿನಿಮಾ ಸೂಕ್ತ ಅನಿಸಿದೆ’ ಎನ್ನುತ್ತಾರೆ.

ದೇವಿಕಾ ಭಟ್‌ ಮತ್ತು ಮಾಲವಿಕಾ ಶರ್ಮಾ ಚಿತ್ರದ ನಾಯಕಿಯರು.