ಅನುಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಗ್ಗ ಚಿತ್ರದ ಟೀಸರ್ ಬಿಡುಗಡೆ : ಎರಡು ಭಾಗಗಳಲ್ಲಿ ಬರಲಿರುವ ಚಿತ್ರ

| Published : Jul 19 2024, 12:49 AM IST / Updated: Jul 19 2024, 05:47 AM IST

ಅನುಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಗ್ಗ ಚಿತ್ರದ ಟೀಸರ್ ಬಿಡುಗಡೆ : ಎರಡು ಭಾಗಗಳಲ್ಲಿ ಬರಲಿರುವ ಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಅನುಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಗ್ಗ ಚಿತ್ರದ ಟೀಸರ್ ಬಂದಿದೆ.

ಅನು ಪ್ರಭಾಕರ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಗ್ಗ’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಎರಡು ಭಾಗಗಳಲ್ಲಿ ಬರಲಿರುವ ಈ ಚಿತ್ರವನ್ನು ರಾಜ್‌ ಭಾರದ್ವಾಜ್‌ ನಿರ್ಮಿಸಿದ್ದು, ಅವಿನಾಶ್‌ ಎನ್‌ ನಿರ್ದೇಶಿಸಿದ್ದಾರೆ. ಹರ್ಷಿಕಾ ಪೂಣಚ್ಚ, ವೇಣು, ಅವಿನಾಶ್‌, ತಬಲಾ ನಾಣಿ, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗ್ಡೆ, ಮೈಕೋ ಮಂಜು ತಾರಾಗಣದಲ್ಲಿದ್ದಾರೆ. ನಿರ್ದೇಶಕ ಆರ್‌ ಚಂದ್ರು ಹಾಗೂ ನಿರ್ಮಾಪಕ ಕೆ ಮಂಜು ಅವರು ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡಕ್ಕೆ ದಯಾಳ್‌ ಪದ್ಮನಾಭ್‌ ಅವರು ಬೆನ್ನೆಲುಬಾಗಿ ನಿಂತಿದ್ದಾರೆ.

ಅವಿನಾಶ್‌, ‘ಇದು ನನ್ನ ಮೊದಲ ಸಿನಿಮಾ. ಈ ಚಿತ್ರದಲ್ಲಿ ಹಗ್ಗವೇ ಒಂದು ಪಾತ್ರವಾಗಿರುತ್ತದೆ. ಸೂಪರ್‌ ಪವರ್‌ ಬೇಸ್‌ ಮಾಡಿಕೊಂಡು ಮಾಡಿರುವ ಹಾರರ್‌ ಹಾಗೂ ಥ್ರಿಲ್ಲರ್‌ ಜಾನರ್‌ ಸಿನಿಮಾ’ ಎಂದರು.

ಅನುಪ್ರಭಾಕರ್‌, ‘ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು ಸೂಪರ್‌ ಹೀರೋ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳಲ್ಲ’ ಎಂದರು.

ಹರ್ಷಿಕಾ ಪೂಣಚ್ಚ ಚಿತ್ರದಲ್ಲಿ ಪತ್ರಕರ್ತೆ ಪಾತ್ರ ಮಾಡಿದ್ದಾರೆ.