ಸಾರಾಂಶ
ನಟಿ ಹರ್ಷಿಕಾ ಪೂಣಚ್ಚ ಶಿ ರೋ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿನಿವಾರ್ತೆ
ನಟಿ ಹರ್ಷಿಕಾ ಪೂಣಚ್ಚ ಮಾಡಿರುವ ಸಮಾಜ ಸೇವೆಯನ್ನು ಪರಿಗಣಿಸಿ ಸುಧಾ ವೆಂಚರ್ಸ್ ಸಂಸ್ಥೆ ‘ಶೀ ರೋ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಬಗ್ಗೆ ವಿವರ ನೀಡಿದ ಹರ್ಷಿಕಾ ಪೂಣಚ್ಚ, ‘ಶೀ ರೋ ಅಂದರೆ ಶೀ ಈಸ್ ದ ಹೀರೋ ಎಂಬ ಅರ್ಥ. ನಮ್ಮ ಭುವನಂ ಫೌಂಡೇಶನ್ ಕಡೆಯಿಂದ ನಾವು ಮಾಡಿರುವ ಸಾಮಾಜಿಕ ಕಳಕಳಿಯ ಕೆಲಸವನ್ನು ಪರಿಗಣಿಸಿ ಈ ಪ್ರಶಸ್ತಿ ಸಿಕ್ಕಿದೆ. ಕೋವಿಡ್ ವೇಳೆ ಸುಮಾರು 25 ಸಾವಿರ ಕುಟುಂಬಗಳಿಗೆ ನೆರವಾಗಿದ್ದೆವು. ಕೊಡಗು ಹಾಗೂ ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿಯಲ್ಲೂ ನಮ್ಮಿಂದಾದ ನೆರವು ನೀಡಿದ್ದೆವು. ಇದನ್ನು ಪರಿಗಣಿಸಿ, ಜನರೇ ಓಟ್ ಮಾಡಿ ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಬಹಳ ಹೆಮ್ಮೆ ಇದೆ. ಇದು ನಮ್ಮ ಸಾಮಾಜಿಕ ಕೆಲಸ ಮುಂದುವರಿಸಲು ಸ್ಫೂರ್ತಿಯನ್ನೂ ನೀಡುತ್ತದೆ’ ಎಂದರು.