ಸಾರಾಂಶ
ಭಗತ್ ಆಳ್ವ, ಶ್ವೇತಾ ನಟನೆಯ ಹರ್ಷಪ್ರಿಯ ನಿರ್ದೇಶನದ ಸೀರಿಯಸ್ ಸಿನಿಮಾ ಹೆಜ್ಜಾರು. ಜುಲೈ 19ಕ್ಕೆ ತೆರೆಗೆ ಬರ್ತಿರೋ ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ
ಕನ್ನಡಪ್ರಭ ಸಿನಿವಾರ್ತೆ
ಕಿರುತೆರೆಯ ಚಿತ್ರಕಥೆ ಬರಹಗಾರ ಹರ್ಷಪ್ರಿಯ ನಿರ್ದೇಶನದ ಚೊಚ್ಚಲ ಸಿನಿಮಾ ‘ಹೆಜ್ಜಾರು’ ಟ್ರೇಲರ್ ರಾಮ್‌ಜೀ ರಿದಮ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಜು.19ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.ಸಿನಿಮಾ ಕುರಿತು ನಿರ್ದೇಶಕ ಹರ್ಷಪ್ರಿಯ, ‘ನಮ್ಮ ಸಿನಿಮಾದ ಪ್ರಮುಖ ಆಕರ್ಷಣೆಯೇ ಚಿತ್ರಕಥೆ. ನಮ್ಮ ಸಿನಿಮಾ ನೋಡೋರೆಲ್ಲ ಬರಹಗಾರರಾಗೋದು ಗ್ಯಾರಂಟಿ. ಇದೊಂದು ಪ್ಯಾರಲಲ್ ಬದುಕನ್ನು ಕಟ್ಟಿಕೊಡುವ ಸಿನಿಮಾ. ಕಾಮಿಡಿ ಇಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಅಂಶವಿದೆ. ಒಬ್ಬರ ಬದುಕಿನ ಘಟನೆಗಳು ಇನ್ನೊಬ್ಬರ ಬದುಕಿನಲ್ಲೂ ನಡೆಯಬಹುದಾ ಎಂಬುದು ಮುಖ್ಯವಾಗಿ ಬರುತ್ತದೆ. ದಕ್ಷಿಣ ಕನ್ನಡದ ಮಡಂತ್ಯಾರು ಪರಿಸರದಲ್ಲಿ ಮಳೆಯ ಅಬ್ಬರದ ನಡುವೆ ಸಿನಿಮಾದ ಬಹುತೇಕ ಭಾಗ ಶೂಟಿಂಗ್ ಆಗಿದೆ’ ಎಂದರು.ನಿರ್ಮಾಪಕ ರಾಮ್‌ಜೀ, ‘ಸಿನಿಮಾದಲ್ಲಿ ನನ್ನನ್ನು ಸೆಳೆದದ್ದು ಗಟ್ಟಿ ಚಿತ್ರಕಥೆ. ನಿರ್ದೇಶಕ ಹರ್ಷಪ್ರಿಯ ಪೇಂಟರ್ ಆಗಿದ್ದವರು. ಅವರ ಬದುಕನ್ನೇ ಒಂದು ಸಿನಿಮಾ ಮಾಡಬಹುದು’ ಎಂದರು. ನಾಯಕ ಭಗತ್ ಆಳ್ವ, ‘ಕಿರುತೆರೆ ಹಿನ್ನೆಲೆಯಿಂದ ಬಂದ ನನಗೆ ಈ ಸಿನಿಮಾ ಮೂಲಕ ಒಂದೊಳ್ಳೆ ಬ್ರೇಕ್ ಸಿಗುವ ನಿರೀಕ್ಷೆ ಇದೆ’ ಎಂದರು. ನಾಯಕಿ ಶ್ವೇತಾ, ‘ತನ್ನದು ಕಾಡುವ ಪಾತ್ರ’ ಎಂದು ಹೇಳಿದರು.