ಹಿಂದಿಗೆ ಹೊರಟ ಕನ್ನಡದ ಕೆರೆಬೇಟೆ

| Published : Mar 29 2024, 12:45 AM IST

ಸಾರಾಂಶ

ಗೌರಿ ಶಂಕರ್ ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆ.

ಕನ್ನಡಪ್ರಭ ಸಿನಿವಾರ್ತೆ

ಗೌರಿಶಂಕರ್‌ ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ ಹಿಂದಿ ರಿಮೇಕ್‌ ಹಕ್ಕುಗಳನ್ನು ನಿರ್ಮಾಪಕ ಉದಯ್‌ ಕೆ ಮಹ್ತಾ ತೆಗೆದುಕೊಂಡಿದ್ದಾರೆ. ಈ ಕುರಿತು ಅವರು, ‘ಈ ಚಿತ್ರವನ್ನು ನಾನು ಹಿಂದಿಯಲ್ಲಿ ಮಾಡುತ್ತೇನೆ. ಅಲ್ಲಿನ ಸ್ಟಾರ್‌ ನಟನ ಜತೆಗೆ ಈ ಚಿತ್ರ ರಿಮೇಕ್‌ ಮಾಡುತ್ತೇನೆ’ ಎಂದು ಹೇಳಿದ್ದಾರೆ. ‘ಕನ್ನಡಿಗರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ಚಿತ್ರ ಹಿಂದಿಗೆ ಹೋಗುತ್ತಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ನಟ ಗೌರಿಶಂಕರ್‌. ರಾಜ್‌ಗುರು ನಿರ್ದೇಶಿಸಿ, ಜೈಶಂಕರ್‌ ಪಾಟೀಲ್‌ ನಿರ್ಮಿಸಿರುವ ಈ ಚಿತ್ರದಲ್ಲಿ ಬಿಂದುಶಿವರಾಮ್‌, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಮುಂತಾದವರು ನಟಿಸಿದ್ದಾರೆ.