ಸಾರಾಂಶ
ಕನ್ನಡಪ್ರಭ ಸಿನಿವಾರ್ತೆ
ಡಾರ್ಲಿಂಗ್ ಕೃಷ್ಣ ತನ್ನ ಪ್ರೀತಿಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮಿಲನಾ ನಾಗರಾಜ್ ಜೊತೆಗಿನ ಪ್ರೇಮ ಸಂದರ್ಭವನ್ನು ತಿಳಿಸಿದ್ದಾರೆ. ಅವರದೇ ಮಾತುಗಳಲ್ಲಿ ಅವರ ಪ್ರೇಮ ಕತೆಯನ್ನು ಓದಿ.ನಾನು ಮಿಲನಾ ಅವರನ್ನು ಮೊದಲು ನೋಡಿದ್ದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ. ಆ ನಂತರ ನಾನು ಅವರನ್ನು ಮಾತನಾಡಿಸಿದ್ದು ನನ್ನ ನಟನೆಯ ‘ಮದರಂಗಿ’ ಚಿತ್ರಕ್ಕಾಗಿ. ಈ ಚಿತ್ರದಲ್ಲಿ ನಟಿಸುವಂತೆ ಅವರನ್ನು ಕೇಳುವುದಕ್ಕೆ ನಾನು ಫೋನ್ ಮಾಡಿದ್ದೆ. ಹಾಗೆ ಇಬ್ಬರು ಮಾತನಾಡಿದ್ದು. ಈ ಫೋನ್ ಕಾಲ್ ನಮ್ಮಿಬ್ಬರನ್ನು ಸ್ನೇಹಿತರನ್ನಾಗಿಸಿತು. ಈ ಹಂತದಲ್ಲೇ ನನಗೆ ಮಿಲನಾ ಅವರ ಮೇಲೆ ಪ್ರೀತಿ ಹುಟ್ಟಿಕೊಂಡಿತು. ಅವರಿಗೂ ನಾನೆಂದರೆ ಇಷ್ಟ ಇತ್ತು. ಆದರೆ, ಮೊದಲು ಪ್ರಪೋಸ್ ಮಾಡಿದ್ದು ಮಾತ್ರ ನಾನೇ. ನಮ್ಮ ಪ್ರೀತಿಯನ್ನು ನಮ್ಮ ಮನೆಯಲ್ಲಿ ಸಹಜವಾಗಿಯೇ ಸ್ವೀಕರಿಸಿದರು. ಆದರೆ, ನಮ್ಮ ಪ್ರೀತಿ ಮಿಲನಾ ಅವರ ಮನೆಯಲ್ಲಿ ಬಾಂಬ್ ಬಿದ್ದಂತೆ ಆಯಿತು. ಕೊನೆಗೂ ಅವರ ಮನೆಯಲ್ಲೂ ನಮ್ಮ ಪ್ರೀತಿಗೆ ಒಪ್ಪಿಗೆ ಸಿಕ್ಕಿತು. ಈಗ ಸಾಕಷ್ಟು ಸಿನಿಮಾಗಳಲ್ಲಿ ಜೋಡಿಯಾಗಿದ್ದೇವೆ. ನಿಜ ಜೀವನದಲ್ಲೂ ಜೋಡಿಯಾಗಿ ಖುಷಿಯಾಗಿದ್ದೇವೆ. ನಾನು ಮಿಲನಾ ಅವರಿಗೆ ಕೊಡಿಸುವ ಗಿಫ್ಟ್ ಎಂದರೆ ಮೊಬೈಲ್. ಇಬ್ಬರು ಫೋನ್ ಬದಲಾಯಿಸಬೇಕು ಎಂದಾಗ ನಾನು ಅವರಿಗೆ ಕೊಡಿಸುತ್ತೇನೆ, ಅವರು ನನಗೆ ಹೊಸ ಫೋನ್ ಕೊಡಿಸುತ್ತಾರೆ.