ನನ್ನ ಸಿನಿಮಾದ ಹಾಡಿನ ಸಾಲು ‘ಇದು ಎಂಥಾ ಲೋಕವಯ್ಯ’ ಶೀರ್ಷಿಕೆ ಆಗಿರುವುದು ಸಂತೋಷ: ಅನಂತ್‌ನಾಗ್‌

| Published : Aug 08 2024, 01:32 AM IST / Updated: Aug 08 2024, 05:05 AM IST

ನನ್ನ ಸಿನಿಮಾದ ಹಾಡಿನ ಸಾಲು ‘ಇದು ಎಂಥಾ ಲೋಕವಯ್ಯ’ ಶೀರ್ಷಿಕೆ ಆಗಿರುವುದು ಸಂತೋಷ: ಅನಂತ್‌ನಾಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಇದು ಎಂಥಾ ಲೋಕವಯ್ಯ ಚಿತ್ರ ಆಗಸ್ಟ್ 9ಕ್ಕೆ ತೆರೆಗೆ ಬರುತ್ತಿದೆ.

 ಸಿನಿವಾರ್ತೆ

ಸಿತೇಶ್ ಸಿ ಗೋವಿಂದ್ ನಿರ್ದೇಶನದ ‘ಇದು ಎಂಥಾ ಲೋಕವಯ್ಯ’ ಚಿತ್ರ ಆ.9ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದ ಎರಡು ಹಾಡುಗಳನ್ನು ಹಿರಿಯ ನಟ ಅನಂತನಾಗ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅನಂತ್‌ನಾಗ್‌, ‘ಈ ಚಿತ್ರದ ಶೀರ್ಷಿಕೆ ನನ್ನ ಸಿನಿಮಾದ ಜನಪ್ರಿಯ ಹಾಡು. ಆ ಹಾಡಿನ ಹೆಸರಿನಲ್ಲಿ ಸಿನಿಮಾ ಆಗಿರುವುದು ಸಂತೋಷದ ವಿಚಾರ’ ಎಂದರು.

ಸಿತೇಶ್‌ ಸಿ ಗೋವಿಂದ್‌, ‘ಇದು ನನ್ನ ಮೊದಲ ಸಿನಿಮಾ. ಕಡಿಮೆ ಸಮಯದಲ್ಲಿ 28 ಮಂದಿ ಕಲಾವಿದರ ಜತೆಗೂಡಿ ಮಾಡಿರುವ ಚಿತ್ರವಿದು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ’ ಎಂದರು. ಈಗ ಬಿಡುಗಡೆ ಆಗಿರುವ ಹಾಡಿಗೆ ರಾಹುಲ್‌ ಹಜಾರೆ, ದೀಪಾ ಸಿತೇಶ್‌ ಸಾಹಿತ್ಯ ಬರೆದಿದ್ದು, ರಿತ್ವಿಕ್‌ ಎಸ್‌ ಚಂದ್‌, ಭದ್ರ ರಾಜಿನ್ ಧ್ವನಿಯಾಗಿದ್ದಾರೆ.

ಅನುರಾಜ್‌, ಮೈತ್ರಿ, ಮೈಮ್‌ ರಾಮದಾಸ್‌, ಗೋಪಿನಾಥ್‌ ಭಟ್‌, ಸುಕನ್ಯಾ, ವಿಶ್ವನಾಥ್‌ ಅಸೈಗೋಳಿ, ಚಂದ್ರಹಾಸ, ಹರೀಶ್ ಬಂಗೇರ ಚಿತ್ರದಲ್ಲಿ ನಟಿಸಿದ್ದಾರೆ. ಮಂಗಲ್ಪಾಡಿ ನರೇಶ್‌ ನಾಮದೇವ್‌ ಶೆಣೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.