‘ಈಗೀಗ ತುಂಬ ಕತೆಗಳನ್ನು ಕೇಳುತ್ತಿದ್ದೇನೆ. ಬಹುತೇಕರು ಡಿಫರೆಂಟ್‌ ಅಥವಾ ಔಟ್‌ ಆಫ್‌ ದಿ ಬಾಕ್ಸ್‌ ಸ್ಟೋರಿಗಳಲ್ಲಿ ನಟಿಸುವಂತೆ ಕೇಳುತ್ತಿದ್ದಾರೆ. ಒಂದೊಳ್ಳೆ ಕಮರ್ಷಿಯಲ್‌ ಕತೆಗೆ ನಾನು ಎದುರು ನೋಡುತ್ತಿದ್ದೇನೆ’.

ಸಿನಿವಾರ್ತೆ

‘ಈಗೀಗ ತುಂಬ ಕತೆಗಳನ್ನು ಕೇಳುತ್ತಿದ್ದೇನೆ. ಬಹುತೇಕರು ಡಿಫರೆಂಟ್‌ ಅಥವಾ ಔಟ್‌ ಆಫ್‌ ದಿ ಬಾಕ್ಸ್‌ ಸ್ಟೋರಿಗಳಲ್ಲಿ ನಟಿಸುವಂತೆ ಕೇಳುತ್ತಿದ್ದಾರೆ. ಒಂದೊಳ್ಳೆ ಕಮರ್ಷಿಯಲ್‌ ಕತೆಗೆ ನಾನು ಎದುರು ನೋಡುತ್ತಿದ್ದೇನೆ’.

ಹೀಗೆನ್ನುತ್ತಾರೆ ನಟಿ ಸಪ್ತಮಿ ಗೌಡ.

‘ಕಾಂತಾರ’ ಚಿತ್ರದ ನಂತರ ತೆಲುಗು, ಹಿಂದಿ ಚಿತ್ರರಂಗಕ್ಕೂ ಹೋಗಿ ಬಂದಿರುವ ನಟಿ, ಸದ್ಯ ಕನ್ನಡದಲ್ಲಿ ಸತೀಶ್‌ ನೀನಾಸಂ ಜೊತೆಗೆ ‘ದಿ ರೈಸ್‌ ಆಫ್‌ ಅಶೋಕ’ ಹಾಗೂ ಡಾಲಿ ಧನಂಜಯ ಜೊತೆಗೆ ‘ಹಲಗಲಿ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಪೈಕಿ ‘ದಿ ರೈಸ್‌ ಆಫ್‌ ಅಶೋಕ’ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ‘ಹಲಗಲಿ’ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದೆ.

ಈ ಹೊತ್ತಿನಲ್ಲಿ ಸಪ್ತಮಿ ಗೌಡ ಬೇರೆ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರೇ ಹೇಳಿದ್ದು, ‘ನನಗೆ ತುಂಬಾ ಕತೆಗಳು ಬರುತ್ತಿದೆ. ಪ್ರತಿ ಕತೆಯನ್ನೂ ಕೇಳುತ್ತಿದ್ದೇನೆ. ಆದರೆ, ‘ಕಾಂತಾರ’ ಚಿತ್ರದ ಎಫೆಕ್ಟೋ ಏನೋ, ಹೆಚ್ಚೆಚ್ಚು ಅದೇ ರೀತಿಯ ಪಾತ್ರಗಳು ಬರುತ್ತಿವೆ. ನಾನು ಇಂಥಾ ಕಥೆಗಳ ಜೊತೆಗೆ ಕಮರ್ಷಿಯಲ್‌ ಸಿನಿಮಾಗೆ ಎದುರು ನೋಡುತ್ತಿದ್ದೇನೆ. ಆದರೆ ರೆಗ್ಯೂಲರ್‌ ಕಮರ್ಷಿಯಲ್‌ ಕತೆಗಳು ಕಡಿಮೆ ಬರುತ್ತಿವೆ’ ಎಂದಿದ್ದಾರೆ.