ಕರಾವಳಿ ಸಿನಿಮಾದಲ್ಲಿ ಮಹಿಷಾಸುರನಾಗಿ ಅಬ್ಬರಿಸಲಿರುವ ಪ್ರಜ್ವಲ್‌

 ಸಿನಿವಾರ್ತೆ

‘ಕರಾವಳಿ’ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌ ಯಕ್ಷಗಾನದ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನದ ಐತಿಹಾಸಿಕ ಪಾತ್ರವಾಗಿರುವ ಮಹಿಷಾಸುರನ ಅವತಾರದಲ್ಲಿ ಪ್ರಜ್ವಲ್ ದೇವರಾಜ್‌ ಕಾಣಿಸಿಕೊಂಡಿರುವ ಲುಕ್ ಮತ್ತು ಅವರು ಆ ಪಾತ್ರಕ್ಕೆ ತಯಾರಾಗುತ್ತಿರುವ ವೀಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾಗವತರಾದ ಪಲ್ಲವ ಗಾಣಿಗ ವೇಷ ವಿನ್ಯಾಸ ಮಾಡಿದ್ದಾರೆ.

ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕರಾವಳಿ’ ಸಿನಿಮಾ ಸದ್ಯ ಚಿತ್ರೀಕರಣದ ಹಂತದಲ್ಲಿದೆ. ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ ಈ ಚಿತ್ರದ್ದು. ಸಂಪದ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಿತ್ರ, ಸಿದ್ಲಿಂಗು ಶ್ರೀಧರ್, ಗೊವಿಂದೇ ಗೌಡ, ನಿರಂಜನ್ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ನಿರ್ದೇಶನವಿದೆ.