ಈಗಿನ‌ ಕಾಲದ ಯುವ ಸಮುದಾಯದ ಮನಸ್ಥಿತಿಯನನ್ನ ಬೇಸ್ ಮಾಡಿಕೊಂಡಿರುವ ಕತೆಯಾಗಿರುವುದರಿಂದ ಇದು ಯೂಥ್‌ಪುಲ್‌ ಸಿನಿಮಾ ಕೂಡ ಹೌದು. ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್ವಲ್‌ ಇರುತ್ತದೆ.

ಚಿತ್ರ: ಇಂಟರ್ವಲ್

 ಶಶಿ ರಾಜ್‌, ಪ್ರಜ್ವಲ್‌ಕುಮಾರ್‌ ಗೌಡ, ಸುಕಿ, ಚರಿತ್ರ ರಾವ್‌, ಸಹನ ಆರಾಧ್ಯ, ಸಮೀಕ್ಷ, ದಾನಂ

ನಿರ್ದೇಶನ: ಭರತ್‌ರೇಟಿಂಗ್‌ : 3

ಆರ್‌.ಕೆ

ಮೂವರು ಹುಡುಗರ ಪಯಣವನ್ನು ಪುಟಗಳನ್ನು ಹೇಳುತ್ತಾ ಜೀವನದ ಬೇರುಗಳು ಇರುವುದು ಹುಟ್ಟೂರಿನಲ್ಲೋ, ಉದ್ಯೋಗ ಆರಿಸಿಕೊಂಡ ಹೋದ ನಗರದಲ್ಲೋ ಎನ್ನುವ ಪ್ರಶ್ನೆಯನ್ನು ಮುಂದಿಡುವುದು ‘ಇಂಟರ್ವಲ್‌’ ಚಿತ್ರದ ಹೆಚ್ಚುಗಾರಿ. ಆರಂಭದಲ್ಲಿ ಪೋಲಿತನ, ತಮಾಷೆಯಾಗಿ ಸಾಗುತ್ತಲೇ ಮೂವರು ಬೇಜವಾಬ್ದಾರಿ ಪಾತ್ರಧಾರಿಗಳ ಮೂಲಕ ಮನಸ್ಸಿಗೆ ಆಪ್ತವಾಗುವ ಸಂದೇಶ ದಾಟಿಸುತ್ತಾರೆ ನಿರ್ದೇಶಕ ಭರತ್‌.ನಗಿಸುತ್ತಲೇ ಸಾಗುವ ಈ ಚಿತ್ರವು ಯಾವುದನ್ನು ಮತ್ತು ಯಾರನ್ನೂ ವೈಭವೀಕರಣ ಮಾಡಿಲ್ಲ. ತೀರಾ ಸಹಜವಾಗಿ ಪ್ರತಿಯೊಂದು ದೃಶ್ಯವನ್ನು ರೂಪಿಸಲಾಗಿದೆ. ‘ದೂರ ಬೆಟ್ಟ ನುಣ್ಣಗೆ’ ಎನ್ನುವ ಮಾತು ನೆನಪಿಸುವ ಈ ಚಿತ್ರದಲ್ಲಿ ಓದೋ ವಯಸ್ಸಿನಲ್ಲಿ ಓದದೆ ಪೋಲಿ ಬಿದ್ದಿರುವ ಮೂವರು ಹುಡುಗರು. ತುಂಬಾ ಕನಸುಗಳನ್ನು ಕಟ್ಟಿಕೊಂಡು ಹಳ್ಳಿ ಬಿಟ್ಟು ನಗರ ಸೇರುತ್ತಾರೆ. ಆದರೆ, ನಗರದಲ್ಲಿ ಇವರು ಹೇಗೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾರೆ, ಏನೋ ಬದಲಾವಣೆ ಆಗೋಯ್ತು ಎನ್ನುವ ಹೊತ್ತಿಗೆ ಮತ್ತಿತ್ತೇನೋ ಸಮಸ್ಯೆ ಎದುರಾಗುತ್ತದೆ. ಕೊನೆಗೆ ಈ ಮೂವರ ಜೀವನದಲ್ಲಿ ಗೆಲ್ಲುತ್ತಾರೆಯೇ ಎಂಬುದು ಚಿತ್ರ. ಈ ನಡುವ ಒಬ್ಬ ಪ್ರೇಮ ಕತೆಯ ಏನಾಗುತ್ತದೆ ಎಂಬುದನ್ನೂ ತೋರಿಸಲಾಗಿದೆ.

ಚಿತ್ರದ ಮೊದಲರ್ಧ ತಮಾಷೆಯಾಗಿ ಸಾಗುತ್ತ, ದ್ವಿತಿಯಾರ್ಧ ಕತೆ ತೆರೆದುಕೊಳ್ಳುವ ಹೊತ್ತಿಗೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಆ ಹೊತ್ತಿಗೆ ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ’ ಎನ್ನುವ ಚಿತ್ರವೊಂದರ ಸಾಲು ನೆನಪಾಗಿ ಪಾತ್ರಧಾರಿಗಳು ಭಾವುಕರಾಗುತ್ತಾರೆ. ಅಲ್ಲಿಂದ ಹೊಸ ತಿರುವು ತೆಗೆದುಕೊಳ್ಳುತ್ತಾರೆ. ಮುಂದೇನು ಎಂಬುದಕ್ಕೆ ಚಿತ್ರ ನೋಡಬೇಕು.ಈಗಿನ‌ ಕಾಲದ ಯುವ ಸಮುದಾಯದ ಮನಸ್ಥಿತಿಯನನ್ನ ಬೇಸ್ ಮಾಡಿಕೊಂಡಿರುವ ಕತೆಯಾಗಿರುವುದರಿಂದ ಇದು ಯೂಥ್‌ಪುಲ್‌ ಸಿನಿಮಾ ಕೂಡ ಹೌದು. ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್ವಲ್‌ ಇರುತ್ತದೆ. ಅದು ಯಾವಾಗ ಮತ್ತು ಹೇಗೆ ಬರುತ್ತದೆ ಎಂಬುದನ್ನು ತಿಳಿಯಲು ಈ ಚಿತ್ರ ನೋಡಬಹುದು. ಮೂವರು ಬೇಜವಾಬ್ದಾರಿ ಪಾತ್ರಧಾರಿಗಳಲ್ಲಿ ಶಶಿ ರಾಜ್‌, ಪ್ರಜ್ವಲ್‌ಕುಮಾರ್‌ ಗೌಡ ಸಹಜವಾಗಿ ನಟಿಸಿದ್ದಾರೆ. ಮೇಕಿಂಗ್‌, ಸಂಗೀತ ಕತೆಗೆ ಪೂರಕವಾಗಿದೆ.