ಐಪಿಟಿ 12 ಜೆರ್ಸಿ ಟ್ರೋಫಿ ಅನಾವರಣ

| Published : Jul 31 2024, 01:01 AM IST

ಸಾರಾಂಶ

ಐಪಿಟಿ 12 ಕ್ರಿಕೆಟ್‌ ಪಂದ್ಯಾವಳಿಯ ಜೆರ್ಸಿ ಹಾಗೂ ಟ್ರೋಫಿ ಅನಾವರಣಗೊಂಡಿದೆ.

ಕನ್ನಡಪ್ರಭ ಸಿನಿವಾರ್ತೆಎನ್‌ 1 ಅಕಾಡೆಮಿ ಸಿನಿಮಾ ನಟರು, ವೈದ್ಯರು, ವಕೀಲರು ಹಾಗೂ ಪತ್ರಕರ್ತರಿಗಾಗಿ ಆಯೋಜಿಸುತ್ತಿರುವ ‘ಐಪಿಟಿ 12’ ಕ್ರಿಕೆಟ್‌ ಪಂದ್ಯಾವಳಿಯ ಜೆರ್ಸಿ ಹಾಗೂ ಟ್ರೋಫಿ ಅನಾವರಣ ಇತ್ತೀಚೆಗೆ ನಡೆಯಿತು.

ಈ ವೇಳೆ ಮಾತನಾಡಿದ ನಟ ಪ್ರಣಮ್‌ ದೇವರಾಜ್‌, ‘ಸಿನಿಮಾ ಹಾಗೂ ಕ್ರಿಕೆಟ್‌ ಇಡೀ ದೇಶದ ಜನರನ್ನು ಒಗ್ಗೂಡಿಸುವ ಮಾಧ್ಯಮ. ಈ ಕ್ರಿಕೆಟ್‌ ಪಂದ್ಯಾಟಕ್ಕೆ ಶುಭವಾಗಲಿ’ ಎಂದು ಹಾರೈಸಿದರು.

ರಣಜಿ ಕ್ರಿಕೆಟ್‌ ಆಟಗಾರರಾದ ಸ್ಟಾಲಿನ್‌ ಹೂವರ್‌ ಹಾಗೂ ಮೊಹಮ್ಮದ್‌ ತಾಹಾ, ಎನ್‌ 1 ಅಕಾಡೆಮಿ ಅಧ್ಯಕ್ಷ ಸುನಿಲ್‌ ಕುಮಾರ್‌ ಬಿ ಆರ್‌, ವಿವಿಧ ತಂಡಗಳ ಮಾಲೀಕರು, ರಾಜಭಾರಿಗಳು ಹಾಗೂ ಆಟಗಾರರು ಈ ವೇಳೆ ಹಾಜರಿದ್ದರು.

ಆ.10 ರಿಂದ 15ರವರೆಗೆ ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸಲಿವೆ.