50 ವರ್ಷಗಳ ಗೆಳೆತನದ ಬಗ್ಗೆ ಬರೆದುಕೊಂಡ ಜಗ್ಗೇಶ್‌

| Published : Apr 06 2024, 12:46 AM IST / Updated: Apr 06 2024, 06:24 AM IST

ಸಾರಾಂಶ

ಜಗ್ಗೇಶ್‌ ತಮ್ಮ 50 ವರ್ಷಗಳ ಮೆಕ್ಯಾನಿಕ್‌ ಫ್ರೆಂಡ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 ಸಿನಿವಾರ್ತೆ

ನಟ ಜಗ್ಗೇಶ್‌ ತಮ್ಮ ಮೆಕ್ಯಾನಿಕ್‌ ಮಿತ್ರನ ಜೊತೆಗಿನ 50 ವರ್ಷಗಳ ಸ್ನೇಹದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 ‘ಇದೇ ಬೈಕ್ ಮೆಕ್ಯಾನಿಕ್ ಅಂಗಡಿಯಲ್ಲಿ ತಂದೆ ಬುಲೆಟ್ ರಿಪೇರಿ ಮಾಡಿಸುತ್ತಿದ್ದರು. ಆಮೇಲೆ ಇವನ ಕೈಗೆ ಅಂಗಡಿ ಬಂತು. ನನ್ನ ಕೈಗೆ ಬುಲೆಟ್ ಬಂತು. ಅಲ್ಲಿಂದ ಇವನು ನನ್ನ ಆತ್ಮೀಯ. 

ಈ ಅಂಗಡಿಯಲ್ಲಿ ಅಂದಿನ ನಮ್ಮ ಸ್ನೇಹಕೂಟ ಕೂರುತ್ತಿತ್ತು. ನಾನು ಬಾಲ್ಯದಲ್ಲಿ ತಪ್ಪು ಮಾಡಿದರೆ ಅಪ್ಪ ಈ ಅಂಗಡಿ ಬಾಗಿಲಿಗೆ ನನ್ನ ಕೈಕಾಲು ಹಗ್ಗದಲ್ಲಿ ಕಟ್ಟಿ ಕೂರಿಸಿ ಶಿಕ್ಷೆ ನೀಡುತ್ತಿದ್ದರು. 

ನನಗೆ ಬಹಳ ಬೇಜಾರಾದರೆ ಅಥವಾ ಸಮಯ ಸಿಕ್ಕರೆ ಇಲ್ಲಿ ಕೂತು ಟೀ ಕುಡಿದು ಬರುತ್ತೇನೆ. ಅಂದ ಹಾಗೆ ಈ ಸ್ನೇಹಿತನ ಹೆಸರು ಅಂತೋಣಿ ಕ್ರೂಸಿಸ್’ ಎಂದು ಜಗ್ಗೇಶ್‌ ಸ್ನೇಹದ ಕಥೆ ಹೇಳಿದ್ದಾರೆ.