ಸಾರಾಂಶ
ಕನ್ನಡದ ಜಾಜಿ ಆಲ್ಬಂ ಅನ್ನು ನಟ ದರ್ಶನ್ ಅವರು ಬಿಡುಗಡೆ ಮಾಡಿದರು.
ಮಾಜಿ ಉಪ ಮೇಯರ್ ಮೋಹನ್ ರಾಜು ಹಾಗೂ ಬಿ ಸುನೀತಾ ಮೋಹನ್ ರಾಜು ದಂಪತಿ ಪುತ್ರಿ ಜಾಜಿ ನಟಿಸಿರುವ ಆಲ್ಬಂ ಹಾಡನ್ನು ನಟ ದರ್ಶನ್ ಅವರು ಬಿಡುಗಡೆ ಮಾಡಿ ಶುಭ ಕೋರಿದರು.
‘ಜಾಜಿ’ ಹೆಸರಿನ ಈ ಆಲ್ಬಂ ಬಿಡುಗಡೆ ಕಾರ್ಯಕ್ರಮಕ್ಕೆ ಶಾಸಕ ಸತೀಶ್ ರೆಡ್ಡಿ, ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸೇರಿದಂತೆ ಹಲವರು ಆಗಮಿಸಿದ್ದರು.
ಈ ಹಾಡಿಗೆ ಹರ್ಷಿತ್ ಗೌಡ ಸಾಹಿತ್ಯ ಹಾಗೂ ಸಂಗೀತ, ಕುಮಾರ್ ಕ್ಯಾಮೆರಾ, ಮೋಹನ್ ನೃತ್ಯ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಇದೆ. ಡಿ ಬಿಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಹಾಡನ್ನು ನೋಡಬಹುದು.ದರ್ಶನ್ ಮಾತನಾಡಿ, ‘ಸ್ನೇಹಿತರಾದ ಮೋಹನ್ ರಾಜು ಅವರು ಸಿಕ್ಕಾಗ ತಮ್ಮ ಮಗಳು ನೃತ್ಯ ಕಲಿಯುತ್ತಿರುವ ವಿಷಯದ ಬಗ್ಗೆ ಹೇಳಿದರು. ಮಗಳ ಹೆಸರು ಜಾಜಿ ಎಂದರು. ಈಗಿನ ಟ್ರೆಂಡ್‌ನಲ್ಲಿ ಜಾಜಿ ಎನ್ನುವ ಹೆಸರು ಕೇಳಿ ಆಶ್ಚರ್ಯವಾಯಿತು. ಅವರ ಮಗನ ಹೆಸರು ಜಾಣ ಅಂತ ತಿಳಿದು ಇನ್ನೂ ಹೆಚ್ಚಿನ ಆಶ್ಚರ್ಯವಾಯಿತು. ಜಾಜಿ ಅವರ ನೃತ್ಯ ಎಷ್ಟು ಚೆನ್ನಾಗಿದೆ ಎಂದು ಈ ಹಾಡೇ ಹೇಳುತ್ತದೆ’ ಎಂದರು.