ಸಾರಾಂಶ
ಸಿನಿವಾರ್ತೆ
ಬೆಂಗಳೂರಿನ ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋಸ್ ಹಾಗೂ ಅಡ್ವೆಂಚರ್ಸ್‌ಗೆ ಒಂದು ವರ್ಷದ ಸಂಭ್ರಮ. ಸಿನಿಮಾಗಳ ಚಿತ್ರೀಕರಣ, ಅಡ್ವೆಂಚರ್ ಮತ್ತು ಪ್ರವಾಸಿ ತಾಣವೂ ಆಗಿರುವ ಜಾಲಿವುಡ್ ಮರನಂಜನೆಯ ಬಹುದೊಡ್ಡ ತಾಣವಾಗಿದೆ. ಡಾ ಐಸರಿ ಕೆ ಗಣೇಶ್ ಅವರ ವೇಲ್ಸ್ ಗ್ರೂಪ್ ಆಫ್ ಕಂಪನಿ ಮಾಲೀಕತ್ವದ ಜಾಲಿವುಡ್ ಸ್ಟುಡಿಯೋ ತಮಿಳಿನಲ್ಲಿ 15 ಸಿನಿಮಾಗಳನ್ನು ನಿರ್ಮಿಸಿದೆ.
ಜಾಲಿವುಡ್ ಸ್ಟುಡಿಯೋದ ಪ್ರಮೋಷನಲ್ ಪಾಲುದಾರ ನಿರ್ದೇಶಕ ಹಾಗೂ ನಿರ್ಮಾಪಕ ನವರಸನ್ ಮಾತನಾಡಿ, ‘ಜಾಲಿವುಡ್‌ನ ಎಂಡಿ ಐಸರಿ ಕೆ ಗಣೇಶ್ ಮಾರ್ಗದರ್ಶನದಲ್ಲಿ ಹೊಸ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ.
ಸದ್ಯದಲ್ಲೇ ಕನ್ನಡ ಚಿತ್ರರಂಗಕ್ಕಾಗಿ ಸಿನಿಮಾ ಅವಾರ್ಡ್ ಕಾರ್ಯಕ್ರಮ ಮಾಡಲಿದ್ದೇವೆ. ಚಿತ್ರೀಕರಣಕ್ಕೆ ಅಗತ್ಯವಾದ ಸೌಲಭ್ಯಗಳನ್ನೂ ಇಲ್ಲಿ ಕಲ್ಪಿಸಿದ್ದು, ಸ್ಟುಡಿಯೋದಲ್ಲಿ ಚಿತ್ರೀಕರಣಕ್ಕಾಗಿ ಮೆಟ್ರೋ ರೈಲು ಸೇರಿದಂತೆ ಎರಡು ಹೊಸ ಯೋಜನೆಗಳು ಸದ್ಯದಲ್ಲೇ ಆರಂಭವಾಗಲಿವೆ. ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, 10 ಲಕ್ಷ ಜನ ಜಾಲಿವುಡ್‌ಗೆ ಭೇಟಿ ನೀಡಿದ್ದಾರೆ’ ಎಂದು ಹೇಳಿದರು.
ಜಾಲಿವುಡ್ ಸ್ಥಳೀಯ ಮುಖ್ಯಸ್ಥ ಬಷೀರ್ ಅಹಮದ್, ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ರಮಣ್ ಕುಮಾರ್ ಹಾಜರಿದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))