ಎಪ್ಪತ್ತೈದು ಮತ್ತು ಅದಕ್ಕಿಂತ ಕಡಿಮೆ ಆಸನ ಸಾಮರ್ಥ್ಯದ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಚಿತ್ರ ಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೂ ಗರಿಷ್ಠ 200 ರು.ಗಳ ಏಕರೂಪದ ಟಿಕೆಟ್ ದರ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಗಡಿನಾಡು ಬೆಳಗಾವಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಸಿನಿಮಾದ ಟ್ರೆಂಡಿಂಗ್ ಹಾಡುಗಳನ್ನೇ ಬಳಸಿಕೊಂಡು ಮಕ್ಕಳಿಗೆ ಪಾಠ ಮಾಡುವ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಖಡಕ್ ಡೈಲಾಗ್‌ಗಳ ಮೂಲಕ ಹೆಸರಾದ ಖ್ಯಾತ ಸಿನಿಮಾ ಬರಹಗಾರ, ನಿರ್ದೇಶಕ ಎಸ್.ಎಸ್.ಡೇವಿಡ್ (55 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಸಾವಿನ ವೇಳೆ ಅವರ ಮೃತದೇಹವನ್ನು ಸ್ವೀಕರಿಸಲೂ ಕುಟುಂಬದವರಿಲ್ಲದೆ ಅನಾಥ ಶವವಾಗಿ ವಿಕ್ಟೋರಿಯಾ ಶವಾಗಾರದಲ್ಲಿ ಇಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ವಿಧಾನಸಭೆಯಲ್ಲಿ ಪ್ರತಿಪಕ್ಷದ ಕೈಗೆ ಸಿಲುಕಿಕೊಂಡ ರಹೀಂಖಾನ್, ಸುರೇಶ್ । ಅಧಿವೇಶನಕ್ಕೆ ಬಂದ ಆಕಾಶ, ಪಾತಾಳಲೋಕ!
‘ಸು ಪ್ರಂ ಸೋ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ, ನಟ ಜೆಪಿ ತುಮಿನಾಡು ಬಾಲಿವುಡ್‌ನ ಸ್ಟಾರ್ ನಟ ಅಜಯ್ ದೇವಗನ್ ಅವರಿಗೆ ಹಾರರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ, ಮುಂದಿನ ಪ್ರಾಜೆಕ್ಟ್ ಕುರಿತು ಜೆಪಿ ತುಮಿನಾಡು ಮಾತುಗಳು.
ದರ್ಶನ್‌ರಂಥಾ ಸ್ಟಾರ್ ನಟರ ಚಿತ್ರಗಳು ಬರದೇ ಹೋದರೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿರುವಾಗಲೇ ನಟಿ ರಮ್ಯಾ ‘ಸಿನಿಮಾ ಗೆಲ್ಲಲು ಸ್ಟಾರ್‌ಗಳು ಬೇಕಿಲ್ಲ’ ಎಂಬ ದಿಟ್ಟತನದ ನುಡಿಗಳನ್ನಾಡಿದ್ದಾರೆ.
ಕಣ್ಣೀರ ಕಾರ್ಮೋಡ, ದುರಾಸೆಯ ಅಟ್ಟಹಾಸ, ಕೊತ್ತಲವಾಡಿ ಎಂಬ ಮಂಡ್ಯದ ಒಂದೂರು. ಬಡತನ, ಉಳ್ಳವರ ಹಿಂಸೆ, ಬಡ್ಡಿದಾಹಕ್ಕೆ ಅರೆಜೀವವಾಗಿ ಬದುಕುತ್ತಿದ್ದ ಜನರ ಕತೆ