ಮಾ 1ಕ್ಕೆ ಜುಗಲ್‌ಬಂದಿ ಸಿನಿಮಾ ತೆರೆಗೆ

| Published : Feb 25 2024, 01:52 AM IST

ಸಾರಾಂಶ

ಮಾರ್ಚ್‌ 1ಕ್ಕೆ ಜುಗಲ್‌ಬಂದಿ ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಯಿತು.

ಕನ್ನಡಪ್ರಭ ಸಿನಿವಾರ್ತೆ

‘ಭಗವದ್ಗೀತೆ, ಕುರಾನ್, ಬೈಬಲ್‌ನಲ್ಲೂ ಬರ್ದಿಲ್ಲ ದುಡ್ಮಾಡೋದ್‌ ಹೇಗಂತ’ ಎಂಬ ಟ್ಯಾಗ್‌ಲೈನ್‌ನಡಿ ಮೂಡಿಬಂದಿರುವ ಚಿತ್ರ ‘ಜುಗಲ್‌ಬಂದಿ’. ಈ ಚಿತ್ರ ಮಾ.1ಕ್ಕೆ ತೆರೆಗೆ ಬರಲಿದೆ. ಇದರ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯ್ತು. ಈ ವೇಳೆ ಮಾತನಾಡಿದ ನಿರ್ದೇಶಕ, ನಿರ್ಮಾಪಕ ದಿವಾಕರ್ ಡಿಂಡಿಮ, ‘ಜುಗಲ್ ಬಂದಿ ವೈಯಕ್ತಿಕವಾಗಿ ಗೆಲ್ಲಲು ಮಾಡಿರುವ ಸಿನಿಮಾವಲ್ಲ. ಚಿತ್ರರಂಗಕ್ಕೆ ಖಾಯಂ ಪ್ರೇಕ್ಷಕರನ್ನು ಹುಟ್ಟಿಸುವ ಕೆಲಸ ಮಾಡೋಣ ಅಂತ ಮಾಡಿರುವ ಚಿತ್ರ’ ಎಂದರು. ನಟಿ ಮಾನಸಿ ಸುಧೀರ್, ‘ನನ್ನ ಪಾತ್ರ ಯಶೋಧ. ಇಲ್ಲಿರುವ ಯಶೋಧಾಳಿಗೆ ಮಗುವಿಲ್ಲ. ಆಕೆ ಅಮ್ಮ ಎನಿಸಿಕೊಳ್ಳಲು ಕಾಯುತ್ತಿದ್ದಾಳೆ. ಕಾಂತಾರದ ಕಮಲಳದ್ದು ಒಂದು ರೇಂಜಾದರೆ ಯಶೋಧ ಪಾತ್ರದ್ದು ಮತ್ತೊಂದು ರೇಂಜ್’ ಎಂದರು.ಸಂಭಾಷಣೆಗಾರ ಮಾಸ್ತಿ ಇದ್ದರು. ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ನಟಿಸಿದ್ದಾರೆ. ಪ್ರದ್ಯೋತ್ತನ್ ಸಂಗೀತ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ.