ಸಾರಾಂಶ
ಸಿನಿವಾರ್ತೆ
ಲೂಸ್ ಮಾದ ಯೋಗಿ ತಮಿಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅರುಣ್ ವಿಜಯ್ ನಾಯಕನಾಗಿರುವ ತಿರುಕುಮಾರನ್ ನಿರ್ದೇಶನದ ಹೊಸ ಚಿತ್ರದಲ್ಲಿ ಖಳನಟನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಬಗ್ಗೆ ಯೋಗೀಶ್ ಅವರ ಮಾತುಗಳು ಇಲ್ಲಿವೆ.- ನನ್ನ ಮೊದಲ ತಮಿಳು ಸಿನಿಮಾದ ನನ್ನ ಪಾತ್ರದ ಘೋಷಣೆ ಏ. 23ಕ್ಕೆ ಆಗಲಿದೆ.
ಈ ಸಿನಿಮಾದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಲಿದ್ದೇನೆ. ಅನ್ಯ ಭಾಷೆಯ ಚಿತ್ರಗಳಲ್ಲಿ ನನ್ನ ಬೆಳವಣಿಗೆಗೆ ಈ ಚಿತ್ರ ಪೂರಕವಾಗಲಿದೆ. - 2013ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ನಾನು ನಟಿಸಿದ ‘ಯಾರೇ ಕೂಗಾಡಲಿ’ ಸಿನಿಮಾದ ನಿರ್ದೇಶಕ ಸಮುತ್ತಿರ ಕಣಿ ನನ್ನನ್ನು ತಮಿಳು ಸಿನಿಮಾರಂಗಕ್ಕೆ ಆಹ್ವಾನಿಸಿದ್ದರು. ನನ್ನ ನಟನೆಯ ತಮಿಳು ಸಿನಿಮಾವನ್ನೂ ಘೋಷಣೆ ಮಾಡಿದ್ದರು. ಆ ಬಳಿಕ ಅವರು ನಟನೆಗಿಳಿದು ದೊಡ್ಡ ಹೆಸರು ಮಾಡಿದರು. ನಮ್ಮ ಸಿನಿಮಾ ಡ್ರಾಪ್ ಆಯ್ತು.
- ಸದ್ಯ ತೆಲುಗು ಸಿನಿಮಾ ಒಂದರ ಮಾತುಕತೆ ನಡೀತಿದೆ. ಈಗ ‘ಸಿದ್ಲಿಂಗು 2’ ಶೂಟಿಂಗ್ ನಡೆಯುತ್ತಿದೆ. ಬಳಿಕ ‘ರೋಸಿ’ ಸಿನಿಮಾದ ಕೆಲಸ. ಆ ಬಳಿಕ ‘ಗ್ರಾಮಾಯಣ’ ಸಿನಿಮಾ. ಅದಾಗಿ ಈ ತಮಿಳು ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದೇನೆ.
- ಹೊಸ ನಿರ್ದೇಶಕ ಉದಯ್ ಅವರೊಂದಿಗೆ ಭೂಗತ ಜಗತ್ತಿನ ಕುರಿತ ಸಿನಿಮಾ ಮಾಡುತ್ತಿದ್ದೇನೆ. ಮುಂದಿನ ವರ್ಷ ಆ ಸಿನಿಮಾ ಟೇಕಾಫ್ ಆಗಲಿದೆ.