ಸಾರಾಂಶ
ಸಿನಿವಾರ್ತೆ
ಕೋಮಲ್ ನಟನೆಯ ‘ಕೋಣ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದು ತನಿಶಾ ಕುಪ್ಪಂಡ ನಿರ್ಮಾಣದ ಮೊದಲ ಚಿತ್ರ. ಹರಿಕೃಷ್ಣ ಎಸ್ ನಿರ್ದೇಶನದ ಈ ಚಿತ್ರದ್ದು ಇದೊಂದು ಡಾರ್ಕ್ ಹ್ಯೂಮರ್ ಕತೆ. ಕೋಮಲ್, ‘ವಿಶೇಷವಾದ ಕತೆಯನ್ನು ಒಳಗೊಂಡ ಸಿನಿಮಾ ಇದು. ನನ್ನ ಪಾತ್ರ ಒಂದು ರೀತಿಯಲ್ಲಿ ಚಾರ್ಲಿ ಚಾಪ್ಲಿನ್ ರೀತಿ. ಅಂದರೆ ತಾನು ಕಷ್ಟದಲ್ಲಿ ಸಿಕ್ಕಿಕೊಂಡರೂ ಜನರನ್ನು ನಗಿಸುವ ಚಾಪ್ಲಿನ್ ಅವರಂತೆ ನನ್ನ ಪಾತ್ರ ಸಾಗುತ್ತದೆ. ಕೋಣ, ಭವಿಷ್ಯ ಹೇಳುವ ರೋಬೋ, ಶಾಸ್ತ್ರ, ನಂಬಿಕೆ, ಮೂಢನಂಬಿಕೆ ಇತ್ಯಾದಿಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.
ಹರಿಕೃಷ್ಣ ಎಸ್, ‘ಈಗ ಬಂದಿರುವ ಟೀಸರ್ ನಮ್ಮ ಚಿತ್ರದ ಕ್ವಾಲಿಟಿ ಹೇಗಿರುತ್ತದೆ ಅಂತ ಹೇಳುತ್ತದೆ. ಹೊಸ ರೀತಿಯಲ್ಲಿ ಕೋಮಲ್ ಅವರನ್ನು ನೋಡಬಹುದು. ಕತೆ, ಮೇಕಿಂಗ್ ಕಾರಣಕ್ಕೆ ಈ ಚಿತ್ರವನ್ನು ಬಹುಭಾಷೆಯಲ್ಲಿ ನಿರ್ಮಿಸುತ್ತಿದ್ದೇವೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ದೀಪಾವಳಿ ಹಬ್ಬದಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ’ ಎಂದರು. ಶಶಾಂಕ್ ಶೇಷಗಿರಿ ಸಂಗೀತ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಇದೆ.