ಸಾರಾಂಶ
ಕುಂಭ ಸಂಭವ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.
ಕನ್ನಡಪ್ರಭ ಸಿನಿವಾರ್ತೆ
ಭೀಮ ಚಿತ್ರದ ಗಿರಿಜಾ ಪಾತ್ರದ ಖ್ಯಾತಿ ಪ್ರಿಯಾ ಮತ್ತೊಂದು ಚಿತ್ರದಲ್ಲಿ ಪೊಲೀಸ್ ಆಗುತ್ತಿದ್ದಾರೆ. ಈ ಚಿತ್ರದ ಹೆಸರು ‘ಕುಂಭ ಸಂಭವ’.ಪ್ರಿಯಾ, ‘ಈ ಚಿತ್ರದಲ್ಲಿ ನಾನು ಪೊಲೀಸ್ ಪಾತ್ರ ಮಾಡುತ್ತಿದ್ದೇನೆ. ಕತೆ ನನಗೆ ತುಂಬಾ ಇಷ್ಟವಾಗಿದೆ. ಹೆಣ್ಣುಮಕ್ಕಳಿಗೆ ತುಂಬಾ ಹತ್ತಿರವಾಗುವ ಸಿನಿಮಾ ಇದು’ ಎಂದರು.
ಟಿ.ಎನ್. ನಾಗೇಶ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ದೇವ್ ನಾಯಕನಾಗಿ, ಮಧುಶ್ರೀ ನಾಯಕಿಯಾಗಿ, ಶೋಭಿತ, ಸುನಂದ, ಕಮಲ್, ಶಿವಾಜಿರಾವ್ ಜಾಧವ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಟಿ.ಎನ್. ನಾಗೇಶ್, ‘2023ರಲ್ಲಿ ಮಂಡ್ಯ ಸುತ್ತಮುತ್ತ ನಡೆದ ಭ್ರೂಣ ಹತ್ಯೆಯ ಕುರಿತ ಕತೆ ಒಳಗೊಂಡ ಸಿನಿಮಾ ಇದು. ಇದೊಂದು ಸಾಮಾಜಿಕ ಸಮಸ್ಯೆಯ ಸುತ್ತಲ್ಲಿನ ನೈಜ ಘಟನೆ ಆಧಾರಿತ ಚಿತ್ರ’ ಎಂದರು.
ನಾಗಾ ನಾಯ್ಕ, ತಾರಾ ನಾಗೇಶ, ಸುನಂದಾ ಹೊಸಪೇಟೆ, ಕಮಲ್, ಡೇವಿಡ್ ರಾಯಪ್ಪ ನಿರ್ಮಾಪಕರು. ಎಂ ಎನ್ ಕೃಪಾಕರ್ ಸಂಗೀತ, ಸಿದ್ದಾರಾಜು ಛಾಯಾಗ್ರಹಣ, ಕ್ರಿಶ್ ಜೋಶಿ ಸಂಭಾಷಣೆ ಇದೆ.