ಸಾರಾಂಶ
ಮೆಜೆಸ್ಟಿಕ್ 2 ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.
ಕನ್ನಡಪ್ರಭ ಸಿನಿವಾರ್ತೆ
ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಟಿಸುತ್ತಿರುವ ‘ಮೆಜೆಸ್ಟಿಕ್ 2’ ಚಿತ್ರಕ್ಕೆ ಚಿತ್ರೀಕರಣ ಮುಗಿದಿದ್ದು, ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗ ಮೂಲದ ಎಚ್ ಆನಂದಪ್ಪ ನಿರ್ಮಾಣದ, ರಾಮು ನಿರ್ದೇಶನದ ಚಿತ್ರವಿದು.ರಾಮು, ‘ಡಿ.26ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಇದೆ. ನಾನು ಮತ್ತು ನಾಯಕ ಭರತ್ ಅವರು ದರ್ಶನ್ ಅಭಿಮಾನಿಗಳು. ನಮ್ಮ ಚಿತ್ರ ಬಿಡುಗಡೆ ಹೊತ್ತಿನಲ್ಲಿ ಚಿತ್ರತಂಡದಿಂದ ಮೈಸೂರಿನಿಂದ ಬೆಂಗಳೂರಿನವರೆಗೆ ಮೆರವಣಿಗೆ ಮಾಡಬೇಕು, ದರ್ಶನ್ ಅವರ 101 ಅಡಿ ಎತ್ತರದ ಕಟೌಟ್ ಹಾಕಬೇಕೆಂಬ ಯೋಚನೆ ಇದೆ’ ಎಂದರು.
ಎಚ್ ಆನಂದಪ್ಪ, ‘ಒಳ್ಳೆಯ ಸಿನಿಮಾ ನಿರ್ಮಿಸಿದ ಖುಷಿ ಇದೆ’ ಎಂದರು. ಭರತ್, ‘ಇದು 2024ರ ಮೆಜೆಸ್ಟಿಕ್‌ನ ಕತೆ. ನನ್ನ ಪಾತ್ರಕ್ಕೆ ಎರಡು ಶೇಡ್ಸ್ ಇದೆ’ ಎಂದರು. ನಾಯಕಿ ಸಂಹಿತಾ ವಿನ್ಯಾ ಇದ್ದರು.