ಸಾರಾಂಶ
‘ 20 ರುಪಾಯಿಯ ಒಂದು ಚುರುಮುರಿ 10 ರುಪಾಯಿಯ ಒಂದು ಕಾಫಿಯಲ್ಲೇ ಖುಷಿ ಕಾಣುವ ಮಧ್ಯಮ ವರ್ಗದ ಬದುಕು, ಅಭಿರುಚಿಯಲ್ಲಿ ಒಂದು ಬ್ಯೂಟಿ ಇದೆ. ಅದನ್ನು ಬಹಳ ಸಹಜವಾಗಿ ನಮ್ಮ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ನಾಗರಾಜ ಸೋಮಯಾಜಿ.
ಇವರ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಎಂಬ ರಿವೆಂಜ್ ಡ್ರಾಮಾ ನ.22ಕ್ಕೆ ತೆರೆಗೆ ಬರುತ್ತಿದೆ.
‘ನಮ್ಮ ಸಿನಿಮಾದ ಪಾತ್ರಗಳೆಲ್ಲ ಚಾಮರಾಜಪೇಟೆ ಆಸುಪಾಸಿನಲ್ಲೇ ಮೈದಳೆದಿವೆ. ಅಲ್ಲಿನ ಪರಿಸರ, ಜೀವನ ಶೈಲಿಯಲ್ಲಿ ಮೈದುಂಬಿಕೊಂಡು ಬದುಕಿನ ಸಂತೋಷ, ಸಂಘರ್ಷಗಳಿಗೆ ಮುಖಾಮುಖಿಯಾಗುತ್ತವೆ. ಮಧ್ಯಮ ವರ್ಗದ ರಿಯಾಲಿಟಿಗಳನ್ನು ತೆರೆ ಮೇಲೆ ನೋಡುವ ಪ್ರತಿಯೊಬ್ಬರೂ ಅದಕ್ಕೆ ಒಂದಲ್ಲ ಒಂದು ರೀತಿ ಕನೆಕ್ಟ್ ಆಗುತ್ತಾ ಹೋಗುತ್ತಾರೆ’ ಎನ್ನುತ್ತಾರೆ ನಾಗರಾಜ್.
ಆರ್ ಜೆ ಪ್ರದೀಪ್ ಕಥೆ ಬರೆಯುವ ಜೊತೆಗೆ ಈ ಸಿನಿಮಾ ನಿರ್ಮಿಸಿದ್ದಾರೆ.
ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು, ಸುನೀಲ್ ರಾವ್, ರಾಕೇಶ್ ಅಡಿಗ, ತೇಜು ಬೆಳವಾಡಿ, ರೇಖಾ ಕೂಡ್ಲಗಿ, ನಾಗೇಂದ್ರ ಶಾ, ಪ್ರಭು ಮುಂಡ್ಕೂರ್, ಹರಿಹರನ್ ವಿ ತಾರಾಗಣದಲ್ಲಿದ್ದಾರೆ.
ಇದು ಮಧ್ಯಮ ವರ್ಗದ ರಿಯಾಲಿಟಿಯನ್ನು ಕಟ್ಟಿಕೊಡುವ ಸಿನಿಮಾ. ಹೊಸ ಬಗೆಯ ನಿರೂಪಣೆ, ನಾವು ಕಂಡ ಜಗತ್ತಿನ ಭಿನ್ನ ನೋಟ ಈ ಸಿನಿಮಾ ಶಕ್ತಿ. - ನಾಗರಾಜ್ ಸೋಮಯಾಜಿ, ನಿರ್ದೇಶಕ