ಸಾರಾಂಶ
ಮರ್ಯಾದೆ ಪ್ರಶ್ನೆ ಸಿನಿಮಾದ ರ್‍ಯಾಪ್ ಸಾಂಗ್ ಬಿಡುಗಡೆಯಾಗಿದೆ.
ಕನ್ನಡಪ್ರಭ ಸಿನಿವಾರ್ತೆನಾಗರಾಜ ಸೋಮಯಾಜಿ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಚಿತ್ರದ ‘ಫಿರಾಕೋ ಮಾರ್’ ಹಾಡು ಸಕ್ಕತ್ ಸ್ಟುಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ. ರ್‍ಯಾಪರ್ ಪಾಶಾ ಭಾಯ್ ಹಾಗೂ ಮೊಹಮ್ಮದ್ ಇಮ್ರಾಜ್ ಅಹ್ಮದ್ ರಚಿಸಿರುವ ಈ ಹಾಡಿಗೆ ಪಾಶಾ ಹಾಡಿ ಹೆಜ್ಜೆ ಹಾಕಿದ್ದಾರೆ. ಸುನೀಲ್ ರಾವ್, ರಾಕೇಶ್ ಅಡಿಗ ಮತ್ತು ಪೂರ್ಣಚಂದ್ರ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಮು ಸಂಗೀತವಿದೆ. ಆರ್‌ಜೆ ಪ್ರದೀಪ ನಿರ್ಮಾಣದ ಈ ಸಿನಿಮಾ ಈ ವಾರ (ನ.22) ತೆರೆಗೆ ಬರಲಿದೆ.