ಸಾರಾಂಶ
ನಟಿ ಮೇಘಾ ಶೆಟ್ಟಿ ಕೈತುಂಬ ಸಿನಿಮಾ ಸಿಕ್ಕಿರೋ ಖುಷಿಯಲ್ಲಿದ್ದಾರೆ.
ನಟಿ ಮೇಘಾ ಶೆಟ್ಟಿ ನಟನೆಯ ಮೂರು ಸಿನಿಮಾಗಳ ಪೋಸ್ಟರ್ ಬಿಡುಗಡೆಯಾಗಿದೆ. ಕವೀಶ್ ಶೆಟ್ಟಿ ನಾಯಕನಾಗಿರುವ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಪೋಸ್ಟರ್‌ನಲ್ಲಿ ಮೇಘಾ ಲಂಗ ದಾವಣಿಯಲ್ಲಿ ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಡಗರ ರಾಘವೇಂದ್ರ ಈ ಸಿನಿಮಾದ ನಿರ್ದೇಶಕ. ಪ್ರಜ್ವಲ್ ದೇವರಾಜ್ ನಟನೆಯ ‘ಚೀತಾ’ ಸಿನಿಮಾದಲ್ಲಿ ಕತ್ತಿ ಹಿಡಿದು ರೋಷಾವೇಶದ ಪಾತ್ರದಲ್ಲಿ ರಕ್ತರಂಜಿತೆಯಾಗಿ ಕಾಣಿಸಿಕೊಂಡಿದ್ದಾರೆ. ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದಲ್ಲಿ ಹಳ್ಳಿ ಹುಡುಗಿ ಲುಕ್‌ನಲ್ಲಿ ಮಿಂಚಿದ್ದಾರೆ.