ಸಾರಾಂಶ
ಶಿವರಾಜ್‌ಕುಮಾರ್ ನಾಯಕನಾಗಿರುವ ‘ಎ ಫಾರ್ ಆನಂದ್’ ಚಿತ್ರಕ್ಕೆ ಮುಹೂರ್ತ ಆಗಿದೆ. ಶ್ರೀನಿ ನಿರ್ದೇಶನದ ಈ ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ.
ಸಿನಿವಾರ್ತೆ
ಶಿವರಾಜ್‌ಕುಮಾರ್ ನಾಯಕನಾಗಿರುವ ‘ಎ ಫಾರ್ ಆನಂದ್’ ಚಿತ್ರಕ್ಕೆ ಮುಹೂರ್ತ ಆಗಿದೆ. ಶ್ರೀನಿ ನಿರ್ದೇಶನದ ಈ ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ.
ಶಿವಣ್ಣ, ‘ಶ್ರೀನಿ ಜತೆಗೆ ಇದು ಎರಡನೇ ಸಿನಿಮಾ. ತುಂಬಾ ದಿನಗಳಿಂದ ಈ ಕತೆ ಮಾಡಬೇಕು ಅಂತ ಚರ್ಚೆ ನಡೆಯುತ್ತಿತ್ತು. ಆದರೆ, ಕತೆ ಕೇಳುವಾಗಲೆಲ್ಲ ಏನೋ ಕೊರತೆ ಕಾಣುತ್ತಿತ್ತು. ಕೊನೆಗೂ ಕತೆಗೆ ಒಂದು ಪೂರ್ಣ ಪ್ರಮಾಣದ ರೂಪ ಬಂದಿದೆ. ಹೀಗಾಗಿ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೇವೆ. ಇದು ತುಂಬಾ ಅಟ್ಯಾಚ್‌ಮೆಂಟ್ ಇರುವ ಕತೆ. ಕತೆಯ ಕೇಂದ್ರಬಿಂದುಗಳು ಮಕ್ಕಳೇ ಆಗಿದ್ದಾರೆ. ಮಕ್ಕಳನ್ನು ಯಾವ ರೀತಿ ಓದಿಸಬೇಕು, ಅವರನ್ನು ಹೇಗೆ ದಾರಿಗೆ ತರಬೇಕು ಎನ್ನುವುದೇ ಈ ಚಿತ್ರದ ಕತೆ. ನಾನು ಶಿಕ್ಷಕನ ಪಾತ್ರ ಮಾಡುತ್ತಿದ್ದೇನೆ’ ಎಂದರು.
ಶ್ರೀನಿ, ‘ಇದು ಕಂಪ್ಲೀಟ್ ಬೇರೆ ರೀತಿಯ ಸಿನಿಮಾ. ಪಕ್ಕಾ ಕೌಟುಂಬಿಕ ಮನರಂಜನೆಯ ಕತೆಯನ್ನು ಚಿತ್ರದಲ್ಲಿ ಹೇಳುತ್ತಿದ್ದೇವೆ’ ಎಂದರು.
ವಾಸುಕಿ ವೈಭವ್ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿ ಎಂ ಸಂಭಾಷಣೆ ಇದೆ.