ಸಾರಾಂಶ
ಸ್ವಯಂಭೂ ಸಿನಿಮಾದಲ್ಲಿ ರಾಣಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಕನ್ನಡದ ಬೆಡಗಿ ನಭಾ ನಟೇಶ್.
ಕನ್ನಡದ ಹುಡುಗಿ ನಭಾ ನಟೇಶ್ ‘ಸ್ವಯಂಭೂ’ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿಖಿಲ್ ಸಿದ್ದಾರ್ಥ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿನ ನಭಾ ಪಾತ್ರದ ಸಣ್ಣ ಝಲಕ್ ಅನ್ನು ಚಿತ್ರತಂಡ ಹೊರಬಿಟ್ಟಿದೆ. ರಾಣಿಯ ಲುಕ್‌ನಲ್ಲಿ ನಭಾ ಕಾಣಿಸಿಕೊಂಡಿದ್ದಾರೆ.
ನಭಾ ಅಪಘಾತದಲ್ಲಿ ಗಾಯಗೊಂಡು ಕೆಲ ಸಮಯದಿಂದ ನಟನೆಯಿಂದ ದೂರ ಉಳಿದಿದ್ದರು. ಇದೀಗ ಚೇತರಿಸಿಕೊಂಡಿದ್ದು ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ‘ಸ್ವಯಂಭೂ’ ಚಿತ್ರಕ್ಕೆ ಸಂಯುಕ್ತಾ ಮೆನನ್ ನಾಯಕಿ. ಭರತ್ ಕೃಷ್ಣಮಾಚಾರಿ ನಿರ್ದೇಶಕರು. ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.