ಸಾರಾಂಶ
ನಭಾ ನಟೇಶ್ ರೆಡ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಇದಕ್ಕಿದ್ದ ಹಾಗೆ ‘ವಜ್ರಕಾಯ’ ಬೆಡಗಿ ನಭಾ ನಟೇಶ್ ರೆಡ್ ವ್ಯಾಮೋಹಿ ಆಗಿಬಿಟ್ಟಿದ್ದಾರೆ. ಕೆಂಪು ಹಿನ್ನೆಲೆಯಲ್ಲಿ ಕೋಲ್ಮಿಂಚಿನಂಥಾ ವರ್ಕ್ ಇರುವ ಗೌನ್‌ನಲ್ಲಿ ಅಪ್ಸರೆಯಂತೆ ಮಿಂಚಿದ್ದಾರೆ. ಹೊತ್ತು ಗೊತ್ತು ಇಲ್ಲದೇ ಆಲ್ ಆಫ್ ಎ ಸಡನ್ ಇಂಥದ್ದೊಂದು ಫೋಟೋಶೂಟ್ ಮಾಡಿಸೋದಕ್ಕೆ ಏನ್ ಕಾರಣ ಅಂತ ಕೇಳಿದರೆ, ಮಾದಕ ನಗೆಯೊಂದನ್ನು ಬಿಟ್ಟು ಮತ್ಯಾವ ಉತ್ತರವೂ ಈ ಸುಂದರಿ ಕಡೆಯಿಂದ ಬರೋದಿಲ್ಲ.ಕೆಲ ಸಮಯದ ಹಿಂದೆ ಅಪಘಾತವೊಂದರಿಂದ ಜೀವದಾನ ಪಡೆದಿರುವ ನಭಾ, ಸದ್ಯ ‘ಸ್ವಯಂಭು’ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥ್ ಜೊತೆ ಡ್ಯುಯೆಟ್ ಹಾಡ್ತಿದ್ದಾರೆ.