ಸಾರಾಂಶ
ಗೋಪಾಲ್ ಹಳೇಪಾಳ್ಯ ರಚಿಸಿ, ನಿರ್ಮಿಸಿ, ನಿರ್ದೇಶನ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ ‘ನೈಸ್‌ರೋಡ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.
ಗೋಪಾಲ್ ಹಳೇಪಾಳ್ಯ ರಚಿಸಿ, ನಿರ್ಮಿಸಿ, ನಿರ್ದೇಶನ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ ‘ನೈಸ್‌ರೋಡ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಈ ಸಿನಿಮಾ ಕುರಿತು ಗೋಪಾಲ್ ಹಳೇಪಾಳ್ಯ, ‘ಯಾವುದೋ ಜನ್ಮದಲ್ಲಿ ಪಾಪ ಮಾಡಿದ್ದೀನಿ ಅಂತ ಕಾಣತ್ತೆ, ಈ ಜನ್ಮದಲ್ಲಿ ಅನುಭವಿಸ್ತಿದೀನಿ ಅಂತ ಕೆಲವು ಹೇಳಿರುವುದು ಕೇಳಿರಬಹುದು. ಆ ಹಿನ್ನೆಲೆಯಲ್ಲಿ ಈ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಜನ್ಮದಲ್ಲೇ ಯಾಕೆ ಕಷ್ಟ ಸಿಗಲ್ಲ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎನ್ನುತ್ತಾರೆ.ಪ್ರಧಾನ ಪಾತ್ರದಲ್ಲಿ ನಟಿಸಿರುವ ಧರ್ಮ, ‘ನಾನು ಪೊಲೀಸ್ ಆಗಿ ನಟಿಸುತ್ತಿರುವ 86ನೇ ಸಿನಿಮಾ’ ಎಂದರು. ಜ್ಯೋತಿ ರೈ, ಗಿರಿಜಾ ಲೋಕೇಶ್, ಶೈಲಶ್ರೀ ಸುದರ್ಶನ್, ಗೋವಿಂದೇಗೌಡ, ಸಚ್ಚಿ, ಪ್ರಭುರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.