ಸಾರಾಂಶ
ರಮೇಶ್, ಗಣೇಶ್ ನಟನೆಯ ಯುವರ್ ಸಿನ್ಸಿಯರ್ಲೀ ರಾಮ್ ಸಿನಿಮಾಕ್ಕೆ ನಿಶ್ವಿಕಾ ನಾಯ್ಡು ನಾಯಕಿ.
ಕನ್ನಡಪ್ರಭ ಸಿನಿವಾರ್ತೆ
ರಮೇಶ್ ಅರವಿಂದ್ ಹಾಗೂ ಗಣೇಶ್ ನಾಯಕರಾಗಿ ನಟಿಸುತ್ತಿರುವ ‘ಯುವರ್ ಸಿನ್ಸಿಯರ್ಲೀ ರಾಮ್’ ಸಿನಿಮಾಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಗಣೇಶ್ ಜೊತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಒಂದು ಹಾಡಿನ ಶೂಟಿಂಗ್ ಪೂರ್ಣವಾಗಿದೆ. ಜನಪ್ರಿಯ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕರಾಗಿದ್ದ ಎ ಆರ್ ವಿಖ್ಯಾತ್ ಈ ಸಿನಿಮಾದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ಸತ್ಯ ರಾಯಲ ನಿರ್ಮಾಪಕರು. ಹಿಂದೆ ‘ಸಕತ್’ ಸಿನಿಮಾದಲ್ಲೂ ಗಣೇಶ್ ಹಾಗೂ ನಿಶ್ವಿಕಾ ನಾಯಕ ನಾಯಕಿಯಾಗಿ ನಟಿಸಿದ್ದರು. ಸದ್ಯ ಈ ಜೋಡಿಯ ‘ಯುವರ್ ಸಿನ್ಸಿಯರ್ಲೀ ರಾಮ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.