ಚಿತ್ರರಂಗ ಗುಡ್‌ ಬೈ ಹೇಳಬೇಕು ಅಂದುಕೊಂಡಿದ್ದೆ : ಬಹು ಭಾಷಾ ತಾರೆ ನಿತ್ಯಾ ಮೆನನ್‌

| Published : Jan 11 2025, 12:45 AM IST / Updated: Jan 11 2025, 04:42 AM IST

ಸಾರಾಂಶ

ಸಿನಿಮಾ ರಂಗ ತ್ಯಜಿಸುವ ಬಗ್ಗೆ ನಿತ್ಯಾ ಮೆನನ್‌ ಮಾತು

 ಸಿನಿವಾರ್ತೆ

‘ನನ್ನ ವ್ಯಕ್ತಿತ್ವ ಚಿತ್ರರಂಗಕ್ಕೆ ಹೊಂದುವಂತದ್ದಲ್ಲ ಎಂಬ ಭಾವನೆ ನನ್ನದು. ಸಿನಿಮಾವನ್ನು ಇಷ್ಟ ಪಡದ ವ್ಯಕ್ತಿ ನಾನು. ಈಗಲೂ ಹಾಗೇ ಇದ್ದೇನೆ. ಒಪ್ಪಿಕೊಂಡ ಎಲ್ಲಾ ಚಿತ್ರಗಳನ್ನು ಮುಗಿಸಿ ಸದ್ದು ಗದ್ದಲ ಇಲ್ಲದೇ ಚಿತ್ರರಂಗದಿಂದ ದೂರ ಹೋಗುವ ಆಲೋಚನೆ ಮಾಡಿದ್ದೆ. ಅಷ್ಟರಲ್ಲಿ ರಾಷ್ಟ್ರಪ್ರಶಸ್ತಿ ನೀಡುವ ಮೂಲಕ ದೇವರು ಲಂಚ ಕೊಟ್ಟು ಇಲ್ಲೇ ಉಳಿಸಿಕೊಂಡ’ - ಇವು ಬಹುಭಾಷಾ ತಾರೆ ನಿತ್ಯಾ ಮೆನನ್‌ ಮಾತುಗಳು. ಜ.14ರಂದು ಬಿಡುಗಡೆಯಾಗುತ್ತಿರುವ ಇವರು ನಟಿಸಿರುವ ‘ಕಾದಲಿಕ್ಕ ನೇರಮಿಲ್ಲೈ’ ಸಿನಿಮಾ ಪ್ರಚಾರದ ವೇಳೆ ಮಾತನಾಡಿರುವ ನಟಿ, ಕೆಲ ಸಮಯದ ಹಿಂದೆ ತಾನು ಚಿತ್ರರಂಗವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದೆ ಎಂದಿದ್ದಾರೆ.

‘ಚಿತ್ರರಂಗ ಯಾವತ್ತೂ ನನ್ನ ಆಯ್ಕೆ ಆಗಿರಲಿಲ್ಲ. ನನಗೆ ನೇರ, ಸರಳ ಪ್ರಕೃತಿಯ ಮಧ್ಯೆ ಬದುಕುವುದು ಇಷ್ಟ. ಸಿನಿಮಾ ರಂಗಕ್ಕೆ ಬಂದ ಮೇಲೆ ಒಂದು ಹಂತದಲ್ಲಿ ಈ ಬದುಕನ್ನೇ ನಾನು ಬಯಸಿದ್ದಾ ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಂಡೆ. ಅಷ್ಟೊತ್ತಿಗೆ ತಿರುಚಿತ್ರಂಬಲಂ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ದೇವರೇ ಈ ಪ್ರಶಸ್ತಿಯನ್ನು ನನಗೆ ಲಂಚದ ರೂಪದಲ್ಲಿ ಕರುಣಿಸಿದಂತಿತ್ತು’ ಎಂಬ ಅವರ ಮಾತುಗಳು ಟ್ರೆಂಡಿಂಗ್‌ ಆಗಿವೆ.