ಸಾರಾಂಶ
ಕನ್ನಡಪ್ರಭ ಸಿನಿವಾರ್ತೆ‘ನಾಟೌಟ್ ಸಿನಿಮಾದ ಮೊದಲ ಭಾಗ ನೋಡಲು ಹಣ ನೀಡಬೇಕಿಲ್ಲ. ಮಧ್ಯಂತರದ ನಂತರದ ಭಾಗವನ್ನಷ್ಟೇ ಟಿಕೆಟ್ ಖರೀದಿಸಿ ನೋಡಿ. ಜು.19ಕ್ಕೆ ನಮ್ಮ ಸಿನಿಮಾ ರಿಲೀಸ್. ಸದ್ಯಕ್ಕೆ ಈ ಆಫರ್ ಸುಮಾರು 70ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಗೆ ಅನ್ವಯವಾಗಲಿದೆ.’
- ಹೀಗೆಂದು ಘೋಷಿಸಿದವರು ‘ನಾಟೌಟ್’ ಸಿನಿಮಾ ನಿರ್ದೇಶಕ ಅಂಬರೀಶ್ ಎಂ.ಇತ್ತೀಚೆಗೆ ಅಜಯ್ ಪೃಥ್ವಿ ಹಾಗೂ ರಚನಾ ಇಂದರ್ ನಟನೆಯ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಯಿತು. ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬುಲೆನ್ಸ್‌ನಲ್ಲಿ ಕರೆತಂದ ಚಾಲಕ ಹನೀಫ್ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಅಂಬರೀಶ್, ‘ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಇಂಥಾ ಪ್ರಯೋಗಗಳಿಗೆ ವಾಣಿಜ್ಯ ಮಂಡಳಿಯವರು ಬೆಂಬಲ ನೀಡಬೇಕು’ ಎಂದರು. ಕಾಕ್ರೋಚ್ ಸುಧಿ ಚಿತ್ರದಲ್ಲಿ ಹಾವು ಹಿಡಿಯುವ ಸ್ನೇಕ್ ಸೀನನಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ಪೃಥ್ವಿ ಆ್ಯಂಬ್ಯುಲೆನ್ಸ್ ಡ್ರೈವರ್ ಪಾತ್ರದಲ್ಲಿ, ರಚನಾ ನರ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್ ಮುಖ್ಯಪಾತ್ರದಲ್ಲಿದ್ದಾರೆ.
ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ಈ ಸಿನಿಮಾದ ನಿರ್ಮಾಪಕರು.