ಪ್ಯಾನ್ ಇಂಡಿಯಾ ಲೆವೆಲ್‌ ಟಾಪ್‌ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುತ್ತಿರುವ ರುಕ್ಮಿಣಿ ವಸಂತ್‌ ಬಿಡುವು ಮಾಡಿಕೊಂಡು ತಮ್ಮ ಖಯಾಲಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಮಾತಲ್ಲಿ ಒಬ್ಬ ನಾಯಕ ನಟಿಯ 10 ಖಯಾಲಿಗಳು.

 ಪ್ಯಾನ್ ಇಂಡಿಯಾ ಲೆವೆಲ್‌ ಟಾಪ್‌ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುತ್ತಿರುವ ರುಕ್ಮಿಣಿ ವಸಂತ್‌ ಬಿಡುವು ಮಾಡಿಕೊಂಡು ತಮ್ಮ ಖಯಾಲಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಮಾತಲ್ಲಿ ಒಬ್ಬ ನಾಯಕ ನಟಿಯ 10 ಖಯಾಲಿಗಳು.

1. ಪುಸ್ತಕ, ಪುಸ್ತಕ, ಪುಸ್ತಕ

ಶೂಟಿಂಗ್‌ ನಡುವೆ, ಪ್ರಯಾಣ ಮಾಡುವಾಗ ಪುಸ್ತಕಗಳೇ ನನ್ನ ಸಂಗಾತಿ. ಪುಸ್ತಕವೊಂದು ಕೈಯಲ್ಲಿದ್ದರೆ ಮನಸ್ಸು ಹ್ಯಾಪಿಯಾಗಿರುತ್ತದೆ. ಮೇರಿ ಆಲಿವರ್ ಬರೆದ ‘ಡಿವೋಶನ್ಸ್‌’ ಪುಸ್ತಕವನ್ನು ಸದ್ಯ ಓದುತ್ತಿದ್ದೇನೆ.

2. ಕಲರ್‌ಫುಲ್‌ ಪ್ಲೇಟ್ಸ್‌

ಹಣ್ಣು, ತರಕಾರಿಗಳಿಂದ ಕಲರ್‌ಫುಲ್‌ ಆಗಿ ಅಲಂಕರಿಸಿರುವ ಪ್ಲೇಟ್‌ಗಳ ಬಗ್ಗೆ ನನಗೆ ವ್ಯಾಮೋಹ. ಟೇಸ್ಟಿ ಕೇಕ್‌ಗಳು, ಸ್ವೀಟ್‌ಗಳನ್ನು ಅಲಂಕರಿಸಿಟ್ಟದ್ದನ್ನು ನೋಡಲೂ ಖುಷಿ.

3. ಹೂವಿನ ಮೇಲೆ ಪ್ರೀತಿ

ಬಹುಶಃ ಸಮಯ ಸಿಕ್ಕರೆ ಇಡೀ ದಿನ ಹೂವಿನಂಗಡಿಯಲ್ಲಿ ಕಳೆಯಬಹುದು, ಹೂವುಗಳೆಂದರೆ ಅಂಥಾ ಪ್ರೀತಿ.

4. ಸೂರ್ಯಾಸ್ತ

ಶೂಟಿಂಗ್‌ಗೆಂದು ಊರೂರು ಅಲೆಯುವಾಗ ಸಂಜೆಯಾಯಿತೆಂದರೆ ಕಣ್ಣುಗಳನ್ನು ಆಕಾಶದತ್ತ ನೆಡುತ್ತೇನೆ. ಸೂರ್ಯಾಸ್ತ ನೋಡುತ್ತ ಕಳೆದು ಹೋಗುವುದು ನನ್ನಿಷ್ಟದ ಖಯಾಲಿ.

5. ಸಮುದ್ರ

ಕೊನೆಯಿಲ್ಲದಂತೆ ಹಬ್ಬಿರುವ ನೀರು, ರಭಸದ ಅಲೆಗಳು ಹೊತ್ತು ತರುವ ಕನಸು, ನೆನಪುಗಳ ಲೋಕ.. ಚಂದ. ಸಮುದ್ರದ ಅಗಾಧತೆ, ಏರಿಳಿತ ಎಲ್ಲವೂ ಜೀವನ ಪಾಠ. ಸಮುದ್ರದಲೆಗಳ ಮೇಲೆ ಸ್ಕ್ಯೂಬಾ ಡೈವಿಂಗ್‌ ಮಾಡುವುದೂ ಖುಷಿ ಕೊಡುವ ಹವ್ಯಾಸ.

6. ಮರಗಳ ನಡುವಿನ ಗಾಳಿ

ಮರಗಳ ನಡುವೆ ನಡೆಯುವಾಗ ಮರ, ಮರಗಳು ಮಾತಾಡಿ ನಗುವಂತೆ ಗಾಳಿ ಬೀಸುತ್ತಿರುತ್ತದೆ. ಅದನ್ನು ಅನುಭವಿಸುವುದು ಬಹಳ ಸಂತೋಷ ಕೊಡುತ್ತದೆ.

7. ಕುದುರೆ ಸವಾರಿ

ನಾನು ‘ಕಾಂತಾರ ಚಾಪ್ಟರ್‌ 1’ ಸಿನಿಮಾಕ್ಕಾಗಿ ಕುದುರೆ ಸವಾರಿ ಕಲಿತೆ. ಸುಮಾರು ಒಂದು ತಿಂಗಳ ಕಾಲ ಕಲಿತದ್ದು ಇಡೀ ಬದುಕಿಗಾಗುವಷ್ಟಾಯ್ತು. ಸಮಯ ಸಿಕ್ಕರೆ ಹಾರ್ಸ್‌ ರೈಡ್‌ ಮಾಡುತ್ತೇನೆ.

8. ನನ್ನ ಕೆಲಸ

ಸಿನಿಮಾ ನಟನೆ ನಾನು ಹಂಬಲಿಸಿದ ಕೆಲಸ. ಹೀಗಾಗಿ ಕೆಲಸದ ವಿಷಯದಲ್ಲಿ ರಾಜಿ ಇಲ್ಲ. ನನ್ನ ಪಾಲಿನ ಕೆಲಸವನ್ನು ಎನ್‌ಜಾಯ್‌ ಮಾಡಿಕೊಂಡು ಇಷ್ಟಪಟ್ಟು ಮಾಡುತ್ತೇನೆ.

9. ಐಸ್‌ಕ್ರೀಮ್‌

ನನ್ನ ಅಬ್ಸೆಷನ್‌ಗಳಲ್ಲೊಂದು. ಚಳಿಗಾಲದಲ್ಲಿ ಐಸ್‌ಕ್ರೀಮ್‌ ತಿನ್ನೋ ಮಜಾನೇ ಬೇರೆ. ಹಾಗಂತ ಸುರಿಯೋ ಮಳೇಲೂ ಐಸ್‌ಕ್ರೀಮ್‌ ಸವಿಯುತ್ತೇನೆ. ಬಿರುಬಿಸಿಲಲ್ಲಿ ಐಸ್‌ಕ್ರೀಮ್‌ ಸಖತ್‌ ಟೇಸ್ಟಿ.

10. ಪ್ರಕೃತಿಯಲ್ಲಿ ನಡಿಗೆ

ಜನರ ಓಡಾಟ ಕಡಿಮೆ ಇರುವಲ್ಲಿ ನಡೆಯೋದು ನನ್ನಿಷ್ಟದ ಅಭ್ಯಾಸ. ಮರ, ತೊರೆ, ಹಕ್ಕಿ, ಚಿಟ್ಟೆಗಳನ್ನು ಕಣ್ತುಂಬಿಸಿಕೊಳ್ಳುತ್ತ ಪ್ರಕೃತಿಯಲ್ಲಿ ಕಳೆದು ಹೋಗುತ್ತೇನೆ.