ಸಾರಾಂಶ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರ ನಾಯಕಿಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ‘ಕನಕವತಿ’ ಎಂಬ ರಾಜಕುಮಾರಿಯ ಸೊಗಸಾದ ಲುಕ್‌ನಲ್ಲಿ ‘ಸಪ್ತಸಾಗರ’ ಬೆಡಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.
ಸಿನಿವಾರ್ತೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರ ನಾಯಕಿಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ‘ಕನಕವತಿ’ ಎಂಬ ರಾಜಕುಮಾರಿಯ ಸೊಗಸಾದ ಲುಕ್‌ನಲ್ಲಿ ‘ಸಪ್ತಸಾಗರ’ ಬೆಡಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.
ಅಕ್ಟೋಬರ್ 2ಕ್ಕೆ ರಿಲೀಸ್ ಆಗುತ್ತಿರುವ ಈ ಸಿನಿಮಾದ ನಾಯಕಿ ಯಾರು ಅನ್ನುವುದನ್ನು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬಹಿರಂಗಗೊಳಿಸಲಾಗಿದೆ.
ಕದಂಬರ ಆಳ್ವಿಕೆಯ ಕಾಲದ ದಂತಕಥೆಯನ್ನಾಧರಿಸಿ ‘ಕಾಂತಾರ ಚಾಪ್ಟರ್ 1’ ಮೂಡಿಬಂದಿದೆ ಎನ್ನಲಾಗಿದೆ. ಇದರಲ್ಲಿ ಕದಂಬ ರಾಜನ ಮಗಳಾಗಿ ರುಕ್ಮಿಣಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈಗ ಬಿಡುಗಡೆಯಾಗಿರುವ ಪೋಸ್ಟರ್‌ನ ಹಿನ್ನೆಲೆಯಲ್ಲೂ ಅರಮನೆಯ ವಿನ್ಯಾಸವಿದ್ದು ಇದಕ್ಕೆ ಪುಷ್ಠಿ ನೀಡುತ್ತದೆ. ಈಗಾಗಲೇ ಬಹುಭಾಷಾ ಸಿನಿಮಾಗಳಲ್ಲಿ ಮಿಂಚುತ್ತಿರುವ ರುಕ್ಮಿಣಿ ಅವರ ಖ್ಯಾತಿ ‘ಕಾಂತಾರ 1’ ಸಿನಿಮಾದ ಬಳಿಕ ಇನ್ನಷ್ಟು ಎತ್ತರಕ್ಕೇರುವ ನಿರೀಕ್ಷೆ ಇದೆ.
ಸುಮಾರು 400 ಕೋಟಿ ರು. ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಈ ಸಿನಿಮಾ ಸುಮಾರು 1000 ಕೋಟಿ ರು.ಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ ಇದೆ. ಹೊಂಬಾಳೆ ಫಿಲಂಸ್‌ನ ವಿಜಯ ಕಿರಗಂದೂರು ಬಂಡವಾಳ ಹೂಡಿದ್ದಾರೆ.