ನಿಶ್ವಿಕಾ ನಾಯ್ಡು ಹೆಣ್ಣುಮಕ್ಕಳ ಕೆಟ್ಟ ವೀಡಿಯೋ ಮಾಡಿ  ಅವಹೇಳನಕಾರಿಯಾಗಿ ಮಾತನಾಡುವ ಕಿಡಿಗೇಡಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಬ್ಯಾಕ್‌ಲೆಸ್‌ ಡೀಪ್‌ ಕಟ್‌ ಗೌನ್‌ ಧರಿಸಿ ಬಂದಿದ್ದರು. ಅದನ್ನು ಕಿಡಿಗೇಡಿಯೊಬ್ಬ ಕೆಟ್ಟದಾಗಿ ವೀಡಿಯೋ ಮಾಡಿ ಹಂಚಿಕೊಂಡಿದ್ದ. 

 ಸಿನಿವಾರ್ತೆ

ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು ಹೆಣ್ಣುಮಕ್ಕಳ ಕೆಟ್ಟ ವೀಡಿಯೋ ಮಾಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಕಿಡಿಗೇಡಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದಕ್ಕೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಬ್ಯಾಕ್‌ಲೆಸ್‌ ಡೀಪ್‌ ಕಟ್‌ ಗೌನ್‌ ಧರಿಸಿ ಬಂದಿದ್ದರು. ಅದನ್ನು ಕಿಡಿಗೇಡಿಯೊಬ್ಬ ಸೋಷಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ವೀಡಿಯೋ ಮಾಡಿ ಹಂಚಿಕೊಂಡಿದ್ದ. ಇದು ವೈರಲ್‌ ಆಗಿತ್ತು.

ಇದರಿಂದ ಸಿಟ್ಟಗೆದ್ದ ನಟಿ ನಿಶ್ವಿಕಾ ನಾಯ್ಡು ವೀಡಿಯೋ ಹರಿಯಬಿಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಹೆಣ್ಣು ಮತ್ತು ಆಕೆ ಧರಿಸುವ ಬಟ್ಟೆಯ ಬಗ್ಗೆ ಟೀಕೆ ಮಾಡಲು ನಿಮಗೆ ನಾಚಿಕೆಯಾಗಬೇಕು. ಹೆಣ್ಣು ಬೆತ್ತಲೆಯಾಗಿ ನಿಂತಿದ್ದರೂ ಆಕೆಯ ಅನುಮತಿ ಇಲ್ಲದೆ ನೀವು ಅವರನ್ನು ಕಣ್ಣೆತ್ತಿ ನೋಡುವಂತಿಲ್ಲ. ಮಹಿಳೆಯರು ಯಾವ ಥರ ಬಟ್ಟೆ ಹಾಕಬೇಕು ಅನ್ನುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಪಬ್ಲಿಕ್‌ನಲ್ಲೇ ಜಿಪ್‌ ಓಪನ್‌ ಮಾಡಿ ರಾಜಾರೋಷವಾಗಿ ಮೂತ್ರ ವಿಸರ್ಜನೆ ಮಾಡುವ ನೀವು ಮೊದಲು ಮಾನ ಮುಚ್ಚಿಕೊಳ್ಳಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಶ್ವಿಕಾ ಅವರ ಮಾತು ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ.