ಡಿ.27ಕ್ಕೆ ಔಟ್‌ ಆಫ್‌ ಸಿಲಬಸ್ ಸಿನಿಮಾ ತೆರೆಗೆ : ಮುಂಗಡವಾಗಿ 5 ಸಾವಿರ ಟಿಕೆಟ್ ಗಳು ಸೇಲ್

| Published : Dec 12 2024, 12:30 AM IST / Updated: Dec 12 2024, 05:03 AM IST

ಸಾರಾಂಶ

ಡಿ.27ಕ್ಕೆ ಔಟ್‌ ಆಫ್‌ ಸಿಲಬಸ್ ಸಿನಿಮಾ ತೆರೆಗೆ ಬರುತ್ತಿದೆ. ಮುಂಗಡವಾಗಿ 5 ಸಾವಿರ ಟಿಕೆಟ್ ಗಳು ಸೇಲ್ ಆಗಿವೆ.

  ಸಿನಿವಾರ್ತೆ

‘ಔಟ್ ಆಫ್ ಸಿಲಬಸ್’ ಚಿತ್ರದ 5 ಸಾವಿರ ಟಿಕೆಟ್‌ಗಳು ಬುಕ್‌ ಮೈ ಶೋ ಮೂಲಕ ಮುಂಗಡವಾಗಿ ಬುಕಿಂಗ್ ಆಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಮೂಲಕ ‘ಔಟ್‌ ಆಫ್‌ ಸಿಲಬಸ್‌’ ಚಿತ್ರ ಹೊಸ ದಾಖಲೆ ಮಾಡಿದೆ. ಟೀಸರ್‌, ಚಿತ್ರದ ಪಾತ್ರಧಾರಿಗಳ ಔಟ್‌ ಲುಕ್‌, ಹಾಡುಗಳ ಮೂಲಕ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ತಂಡವು ಸಿನಿಮಾ ಬಿಡುಗಡೆಗೆ ಮುನ್ನವೇ 50 ಸಾವಿರ ಟಿಕೆಟ್‌ ಮಾರಾಟದ ಗುರಿಯನ್ನು ಹಾಕಿಕೊಂಡಿದೆ.

ಪ್ರದೀಪ್‌ ದೊಡ್ಡಯ್ಯ ಹಾಗೂ ಹೃತಿಕಾ ಶ್ರೀನಿವಾಸ್‌ ಜೋಡಿಯಾಗಿ ನಟಿಸಿರುವ ‘ಔಟ್‌ ಆಫ್‌ ಸಿಲಬಸ್‌’ ಚಿತ್ರದ ಟ್ರೇಲರ್‌ ಇದೀಗ ಬಿಡುಗಡೆ ಆಗಿದೆ. ವಿಜಯಕಲಾ ಸುಧಾಕರ್‌, ತನುಷ್‌ ಎಸ್‌ ವಿ, ದೇಸಾಯಿ ಗೌಡ ನಿರ್ಮಿಸಿರುವ ಈ ಚಿತ್ರ ಡಿ.27ರಂದು ತೆರೆಗೆ ಬರುತ್ತಿದೆ.

ನಿರ್ದೇಶಕ, ನಟ ಪ್ರದೀಪ್‌ ದೊಡ್ಡಯ್ಯ, ‘ನಟನೆ ಜತೆಗೆ ನಾನೇ ನಿರ್ದೇಶನ ಮಾಡಿದ್ದೇನೆ. ಮನರಂಜನೆಗೆ ಕೊರತೆ ಇಲ್ಲದಂತೆ ಕತೆ ರೂಪಿಸಿದ್ದೇನೆ. ಹೀಗಾಗಿ ಎಲ್ಲಾ ವರ್ಗದ ಜನರಿಗೆ ಸಿನಿಮಾ ಇಷ್ಟವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಾತುಗಳಿಂದ ಸ್ಫೂರ್ತಿಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಈ ಸಿನಿಮಾ ಕನೆಕ್ಟ್‌ ಆಗಲಿದೆ’ ಎನ್ನುತ್ತಾರೆ.

ಅಚ್ಯುತ್‌ ಕುಮಾರ್‌, ಯೋಗರಾಜ್‌ ಭಟ್‌, ರಾಮಕೃಷ್ಣ, ಐಶ್ವರ್ಯ, ಪ್ರಕೃತಿ, ಮಂಜು ಪಾವಗಡ, ಮಹಾಂತೇಶ್‌ ಹಿರೇಮಠ್‌ ನಟಿಸಿದ್ದಾರೆ.