ಸಾರಾಂಶ
ಮಲಯಾಳಂನ ಪಣಿ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಹೊಂಬಾಳೆ ಫಿಲಮ್ಸ್ ವಿತರಣೆ ಮಾಡುತ್ತಿದೆ.
ಸಿನಿವಾರ್ತೆ
ಮಲಯಾಳಂನ ಜೋಜು ಜಾರ್ಜ್ ನಿರ್ದೇಶನ ಹಾಗೂ ನಟನೆಯ ‘ಪಣಿ’ ಚಿತ್ರ ಕನ್ನಡಕ್ಕೂ ಡಬ್ ಆಗಿದ್ದು, ಕನ್ನಡದಲ್ಲಿ ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಲಿದೆ. ನ.29ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಮಲಯಾಳಂನಲ್ಲಿ ಈ ಸಿನಿಮಾ ತೆರೆಗೆ ಬಂದಿದೆ.
ಜೋಜು ಜಾರ್ಜ್, ‘ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನನಗೆ ಇದು ಮೊದಲ ನಿರ್ದೇಶನದ ಸಿನಿಮಾ. ಕಳೆದ ತಿಂಗಳು ಕೇರಳದಲ್ಲಿ ಚಿತ್ರ ತೆರೆ ಕಂಡಿತ್ತು. ಈಗ ಕನ್ನಡದಲ್ಲಿ ಬರುತ್ತಿದೆ. ಸೇಡಿನ ಕಥೆಯಾದ್ದರಿಂದ, ಎಲ್ಲಾ ಕಡೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಮಲಯಾಳಂನಲ್ಲಿ ‘ಪಣಿ’ ಎಂದರೆ ಕೆಲಸ ಎಂದರ್ಥ. ಈ ಹಿಂದೆ ನನ್ನ ಹಲವು ಚಿತ್ರಗಳು ಕರ್ನಾಟಕದಲ್ಲಿ ಯಶಸ್ವಿಯಾಗಿವೆ. ಈ ಚಿತ್ರ ಕೂಡ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ’ ಎಂದರು.
ನಟಿ ಅಭಿನಯ, ಸಾಗರ್ ಸೂರ್ಯ, ಜುನೈಜ್, ಬಾಬ್ಬಿ ಕುರಿಯನ್, ಅಭಯಾ ಹಿರಣ್ಮಯಿ, ರಂಜಿತ್ ವೇಲಾಯುಧನ್ ಇದ್ದರು.