ನನ್ನಮ್ಮ ಬಿಲಿಯನ್ ವ್ಯಕ್ತಿಗಳಲ್ಲಿ ಬಬ್ಬರು: ಪವಿತ್ರಾ ಗೌಡ ಪುತ್ರಿ ಖುಷಿ

| Published : Aug 14 2024, 12:49 AM IST

ನನ್ನಮ್ಮ ಬಿಲಿಯನ್ ವ್ಯಕ್ತಿಗಳಲ್ಲಿ ಬಬ್ಬರು: ಪವಿತ್ರಾ ಗೌಡ ಪುತ್ರಿ ಖುಷಿ
Share this Article
  • FB
  • TW
  • Linkdin
  • Email

ಸಾರಾಂಶ

ಪವಿತ್ರ ಗೌಡ ಪುತ್ರಿ ಖುಷಿ ಜೈಲಲ್ಲಿರುವ ತನ್ನ ಅಮ್ಮನಿಗೆ ಭಾವುಕ ಪತ್ರ ಬರೆದಿದ್ದಾಳೆ.

ಕನ್ನಡಪ್ರಭ ಸಿನಿವಾರ್ತೆರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲು ಪಾಲಾಗಿರುವ ಪವಿತ್ರಾ ಗೌಡ ಅವರಿಗೆ ಪುತ್ರಿ ಖುಷಿ ಗೌಡ ಭಾವುಕ ಪತ್ರ ಬರೆದಿದ್ದಾರೆ. ‘ನನ್ನಲ್ಲಿ ಎಂಥಾ ಪರಿಸ್ಥಿತಿ ಬಂದರೂ ಹೋರಾಡುವ ಧೈರ್ಯ ತುಂಬಿರುವ ನನ್ನಮ್ಮ ಬಿಲಿಯನ್ ವ್ಯಕ್ತಿಗಳಲ್ಲಿ ಒಬ್ಬರು’ ಎಂದಿದ್ದಾರೆ. ಅವರ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

‘ಅಮ್ಮನೇ ನನಗೆ ಪ್ರೇರಣೆ. ಅದೆಂತಹದ್ದೇ ಪರಿಸ್ಥಿತಿ ಇದ್ದರೂ ಹೇಗೆ ಸ್ಟ್ರಾಂಗ್ ಆಗಿ ಎದುರಿಸಬೇಕು ಎಂಬುದನ್ನು ಆಕೆ ಕಲಿಸಿಕೊಟ್ಟಿದ್ದಾರೆ. ಸದಾ ನನ್ನನ್ನು ಬೆಂಬಲಿಸುವ, ಧೈರ್ಯ ತುಂಬುವ ಆಕೆಯಂಥವರು ಬಿಲಿಯನ್ ವ್ಯಕ್ತಿಗಳಲ್ಲಿ ಒಬ್ಬರು. ನಾನು ಇಂಥಾ ಮತ್ತೊಬ್ಬ ವ್ಯಕ್ತಿಯನ್ನು ನೋಡಿಲ್ಲ. ಇಂತಹ ಅಮ್ಮನನ್ನು ಪಡೆಯುವುದಕ್ಕೆ ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ. ನಿನ್ನನ್ನು ತುಂಬಾ ಇಷ್ಟ ಪಡುತ್ತೇನೆ ಅಮ್ಮಾ..’ ಎಂದು ಖುಷಿ ಬರೆದಿದ್ದಾರೆ.