ಹಾರರ್‌ ಲೂಪ್ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌

| Published : Jul 05 2024, 12:47 AM IST / Updated: Jul 05 2024, 04:36 AM IST

ಹಾರರ್‌ ಲೂಪ್ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್‌ ದೇವರಾಜ್‌ ನಟಿಸುತ್ತಿರುವ ಸಿನಿಮಾ ಹೆಸರು ‘ರಾಕ್ಷಸ’. ಮಮ್ಮಿ ಖ್ಯಾತಿಯ ಲೋಹಿತ್ ಹೆಚ್‌ ಇದರ ನಿರ್ದೇಶಕ. ಪ್ರಜ್ವಲ್ ದೇವರಾಜ್‌ ಹುಟ್ಟುಹಬ್ಬದಂದು ಪೋಸ್ಟರ್‌ ಬಿಡುಗಡೆಯಾಗಿದೆ.

ಹಾರರ್‌ ಟೈಮ್‌ ಲೂಪ್‌ ಕಾನ್ಸೆಪ್ಟ್‌ನಲ್ಲಿ ಪ್ರಜ್ವಲ್‌ ದೇವರಾಜ್‌ ನಟಿಸುತ್ತಿರುವ ಸಿನಿಮಾ ಹೆಸರು ‘ರಾಕ್ಷಸ’. ಮಮ್ಮಿ ಖ್ಯಾತಿಯ ಲೋಹಿತ್ ಹೆಚ್‌ ಇದರ ನಿರ್ದೇಶಕ. ಪ್ರಜ್ವಲ್ ದೇವರಾಜ್‌ ಹುಟ್ಟುಹಬ್ಬದಂದು ಪೋಸ್ಟರ್‌ ಬಿಡುಗಡೆಯಾಗಿದೆ.

55 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಂಪೂರ್ಣ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಮಾಡಿರುವುದು ವಿಶೇಷ. ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್, ಕೃಷ್ಣ, ಜಯಂತ್ ತಾರಾಗಣದಲ್ಲಿದ್ದಾರೆ.

ದೀಪು ಬಿ ಎಸ್, ನವೀನ್ ಗೌಡ ಹಾಗೂ ಮಾನಸ ಬಂಡವಾಳ ಹೂಡಿದ್ದಾರೆ. ನೋಬಿನ್ ಪೌಲ್ ಸಂಗೀತ, ಜೇಬಿನ್ ಪಿ ಜೋಕಬ್ ಛಾಯಾಗ್ರಹಣವಿದೆ.