ಸಾರಾಂಶ
ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಮದುವೆಯ ಖುಷಿ.
ಸಿನಿವಾರ್ತೆ
‘ಕಾಂತಾರ’ ಸಿನಿಮಾದ ‘ಸಿಂಗಾರ ಸಿರಿಯೇ’, ಅಪ್ಪು ನಟನೆಯ ‘ಚೆಂದ ಚೆಂದ ನನ್ ಹೆಂಡ್ತಿ’ ಮುಂತಾದ ಹಾಡುಗಳ ಸೃಷ್ಟಿಕರ್ತ ಪ್ರಮೋದ್ ಮರವಂತೆ ‘ಕೆಜಿಎಫ್ 2’ ಸಿನಿಮಾ ಗಾಯಕಿ ಸುಚೇತಾ ಬಸ್ರೂರ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಇವರಿಬ್ಬರ ಊರು ಕುಂದಾಪುರದಲ್ಲಿ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದೆ. ರಿಷಬ್ ಶೆಟ್ಟಿ ವಿವಾಹದಲ್ಲಿ ಭಾಗವಹಿಸಿ ದಂಪತಿಗೆ ಶುಭ ಕೋರಿದರು.
ಪ್ರಮೋದ್ ಸದ್ಯದ ಬೇಡಿಕೆಯ ಚಿತ್ರ ಸಾಹಿತಿಯಾಗಿದ್ದರೆ ಸುಚೇತಾ ‘ಕೆಜಿಎಫ್ 2’ ಚಿತ್ರದ ‘ಗಗನ ನೀ ಭುವನ ನೀ’ ಹಾಡಿನ ಮೂಲಕ ಜನಪ್ರಿಯರಾದವರು. ಸುಚೇತಾ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಅಕ್ಕನ ಮಗಳು.