ವಿನೋದ್‌ ಪ್ರಭಾಕರ್‌ ಅಭಿನಯದ ಬಲರಾಮನ ದಿನಗಳು ಸಿನಿಮಾಕ್ಕೆ ಪ್ರಿಯಾ ಆನಂದ್‌ ನಾಯಕಿ

| Published : Jan 02 2025, 12:34 AM IST / Updated: Jan 02 2025, 04:49 AM IST

ಸಾರಾಂಶ

ವಿನೋದ್‌ ಪ್ರಭಾಕರ್‌ ನಟನೆಯ ಬಲರಾಮನ ದಿನಗಳು ಸಿನಿಮಾಕ್ಕೆ ಪ್ರಿಯಾ ಆನಂದ್‌ ನಾಯಕಿ.

ಸಿನಿವಾರ್ತೆ

ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಹೊಸವರ್ಷದ ಮೊದಲ ದಿನ ಪ್ರಿಯಾ ಪಾತ್ರದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

‘ಆ ದಿನಗಳು’ ಖ್ಯಾತಿಯ ಕೆ‌ ಎಂ ಚೈತನ್ಯ ಈ ಸಿನಿಮಾದ ನಿರ್ದೇಶಕರು. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಾಪಕರು. ಜ.15ರಿಂದ ಈ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.